ಅಟ್ಲಾಂಟಿಕ್ ಸಾಗರಕ್ಕೆ ನನ್ನ ಹೆಸರನ್ನಿಡುವ ಪ್ರಸ್ತಾಪವನ್ನು ಗೂಗಲ್ ತಿರಸ್ಕರಿಸಿದೆ: ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : AP
ವಾಶಿಂಗ್ಟನ್, ಅ. 22: ಅಟ್ಲಾಂಟಿಕ್ ಸಾಗರಕ್ಕೆ ‘ಟ್ರಂಪ್ ಸಾಗರ’ ಎಂದು ಮರುನಾಮಕರಣ ಮಾಡಲು ತಾನು ಆಲೋಚಿಸಿದ್ದೆ. ಆದರೆ, ಗೂಗಲ್ ಸಿಇಒ ಸುಂದರ್ ಪಿಚೈ ಈ ಪ್ರಸ್ತಾಪವನ್ನು ತಿರಸ್ಕರಿಸಿದ ಬಳಿಕ ಆ ಕಲ್ಪನೆಯನ್ನು ಕೈಬಿಟ್ಟಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸಾಗರಗಳು ಅನೇಕ ದೇಶಗಳನ್ನು ಆವರಿಸುವುದರಿಂದ ಅವು ವಿಭಿನ್ನವಾಗಿರುತ್ತವೆ ಎಂದು ಪಿಚೈ ಹೇಳಿದ್ದರೆನ್ನಲಾಗಿದೆ.
ಅಟ್ಲಾಂಟಿಕ್ ಸಾಗರವನ್ನು ಮರುನಾಮಕರಣ ಮಾಡುವ ಸಾಧ್ಯತೆಯನ್ನು ಪರಿಶೀಲಿಸಲು ತಾವು ಗೂಗಲ್ ಮ್ಯಾಪ್ಸ್ ಅನ್ನು ಸಂಪರ್ಕಿಸಿದ್ದೆ. ಆದರೆ, ಈ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಮಗೆ ತಿಳಿಸಲಾಯಿತು ಎಂದು ಟ್ರಂಪ್ ಹೇಳಿದರು.
‘ನನಗೆ ಕೇವಲ ಎರಡು ಸಾಗರಗಳು ಮಾತ್ರ ಇಷ್ಟ. ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರ. ಈ ಎರಡನ್ನು ಹೊರತುಪಡಿಸಿ ಬೇರೆ ಯಾವುದೇ ಸಾಗರಕ್ಕೆ ನಾನು ಟ್ರಂಪ್ ಅಥವಾ ಅಮೆರಿಕದ ಹೆಸರನ್ನು ಇಡುವುದಿಲ್ಲ’ ಎಂದು ಅವರು ಹೇಳಿದರು.
ಉತ್ತಮ ಸ್ಥಳಗಳನ್ನು ಗುರುತಿಸುವ ಅಪಾರ ಸಾಮರ್ಥ್ಯ ತನಗಿದೆ ಎಂದು ತಮ್ಮ ತಂದೆ ಹೇಳುತ್ತಿದ್ದರು ಎಂದೂ ಟ್ರಂಪ್ ಪ್ರತಿಪಾದಿಸಿದ್ದಾರೆ.
ಮೆಕ್ಸಿಕೊ ಕೊಲ್ಲಿಯನ್ನು ‘ಅಮೆರಿಕ ಕೊಲ್ಲಿ’ ಮತ್ತು ಆಂಟಾರಿಯೊ ಸರೋವರವನ್ನು ‘ಅಮೆರಿಕ ಸರೋವರ’ ಎಂದು ಮರುನಾಮಕರಣ ಮಾಡುವುದು ಸೇರಿದಂತೆ, ಟ್ರಂಪ್ ಅವರ ಅಧ್ಯಕ್ಷೀಯ ಅವಧಿಯಲ್ಲಿ ಕೈಗೊಂಡ ಭೌಗೋಳಿಕ ಮರುನಾಮಕರಣದ ಪ್ರಯತ್ನಗಳ ನಡುವೆಯೇ ಅವರ ಈ ಹೇಳಿಕೆಗಳು ಬಂದಿವೆ.