Photo Credit : X

ಲಂಡನ್, ಅ. 22: ಕಳಪೆ ಮಟ್ಟದ ಕೊಠಡಿಗಳನ್ನು ಬಾಡಿಗೆಗೆ ನೀಡಿದ್ದಕ್ಕಾಗಿ ದಂಡನೆಗೆ ಒಳಗಾದ ಬ್ರಿಟಿಷ್ ಭಾರತೀಯ ಜಮೀನ್ದಾರನಿಗೆ ನೀಡಲಾಗಿದ್ದ ರಾಯಲ್ ಗೌರವವನ್ನು ರಾಜ ಮೂರನೇ ಚಾರ್ಲ್ಸ್ ರದ್ದುಗೊಳಿಸಿದ್ದಾರೆ.

ಬ್ರಿಟಿಷ್ ಸಾಮ್ರಾಜ್ಯದ ಅತ್ಯುನ್ನತ ಗೌರವಗಳಲ್ಲಿ ಒಂದಾದ ‘ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್’ ಗೌರವವನ್ನು ಹಿಂಪಡೆಯಲಾದ ವ್ಯಕ್ತಿಗಳ ಪಟ್ಟಿಯನ್ನು ಬ್ರಿಟನ್‌ ನ ಕ್ಯಾಬಿನೆಟ್ ಕಚೇರಿಯು ಈ ತಿಂಗಳು ನವೀಕರಿಸಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನಿರ್ಪಾಲ್ ಸಿಂಗ್ ರಿಯಾತ್ ಅವರ ಹೆಸರೂ ಸೇರಿದೆ.

‘ಸಮಾಜ ಸೇವೆ ಮತ್ತು ಪಂಜಾಬಿ ಜನರಿಗೆ ಸಲ್ಲಿಸಿದ ಸೇವೆಗಾಗಿ’ 2010ರಲ್ಲಿ ದಿವಂಗತ ರಾಣಿ ಎಲಿಜಬೆತ್ ಅವರಿಂದ ಈ ಗೌರವ ಪಡೆದಿದ್ದ ರಿಯಾತ್, ಗೌರವ ವ್ಯವಸ್ಥೆಗೆ ಕಳಂಕ ಮತ್ತು ಅಪಕೀರ್ತಿ ತಂದಿದ್ದಾರೆ ಎಂದು ಪರಿಗಣಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನಿರ್ಪಾಲ್ ಸಿಂಗ್ ರಿಯಾತ್ ಅವರಿಗೆ ನೀಡಲಾಗಿದ್ದ ಗೌರವವನ್ನು ರದ್ದುಗೊಳಿಸಬೇಕು ಮತ್ತು ಅವರ ಹೆಸರನ್ನು ಸಂಬಂಧಿತ ನೋಂದಣಿಯಿಂದ ಅಳಿಸಿಹಾಕಬೇಕು ಎಂದು ರಾಜರು ನಿರ್ದೇಶಿಸಿದ್ದಾರೆ ಎಂದು ಕ್ಯಾಬಿನೆಟ್ ಕಚೇರಿಯ ಹೇಳಿಕೆ ತಿಳಿಸಿದೆ.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಪ್ರಸ್ತುತ 70ರ ಹರೆಯದಲ್ಲಿರುವ ಈ ಉದ್ಯಮಿಗೆ ಪಶ್ಚಿಮ ಲಂಡನ್‌ ನಲ್ಲಿ ಕಾನೂನುಬಾಹಿರವಾಗಿ ಮನೆಗಳನ್ನು ಫ್ಲ್ಯಾಟ್‌ ಗಳಾಗಿ ಪರಿವರ್ತಿಸಿ, ಕಷ್ಟದಲ್ಲಿರುವ ಜನರಿಗೆ ಸೂಕ್ತ ಸೌಕರ್ಯಗಳಿಲ್ಲದ ಔಟ್‌ಹೌಸ್‌ ಗಳನ್ನು ಬಾಡಿಗೆಗೆ ನೀಡಿದ್ದಕ್ಕಾಗಿ 3 ಲಕ್ಷ ಪೌಂಡ್‌ಗಳ (ಸುಮಾರು 3.8 ಕೋಟಿ ರೂ.) ದಂಡ ವಿಧಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor