ಇಂಡೋನೇಷ್ಯಾದ ಬಾಲಿಗೆ ತೆರಳುತ್ತಿದ್ದ ದೋಣಿ ಮುಳುಗಡೆ : ಕನಿಷ್ಠ ನಾಲ್ವರು ಮೃತ್ಯು, 38 ಮಂದಿ ನಾಪತ್ತೆ
Update: 2025-07-03 10:10 IST
Photo credit: AP
ಬಾಲಿ : ಇಂಡೋನೇಷ್ಯಾದ ಬಾಲಿಗೆ 65 ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಮುಳುಗಿದ ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟಿದ್ದು, 38 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ದೋಣಿ ಇಂಡೋನೇಷ್ಯಾದ ಪ್ರಮುಖ ದ್ವೀಪವಾದ ಜಾವಾದ ಬನ್ಯುವಾಂಗಿ ಪಟ್ಟಣದಿಂದ ಹೊರಟು ಪ್ರಸಿದ್ಧ ರಜಾ ದ್ವೀಪದ ಉತ್ತರದಲ್ಲಿರುವ ಬಂದರಿಗೆ ಸಾಗುತ್ತಿದ್ದಾಗ ಬಾಲಿ ಜಲಸಂಧಿಯಲ್ಲಿ ಬುಧವಾರ ಮಧ್ಯರಾತ್ರಿ ಮುಳುಗಿದೆ ಎಂದು ಸುರಬಯಾದಲ್ಲಿನ ರಕ್ಷಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಈ ಕುರಿತು ಬನ್ಯುವಾಂಗಿಯ ಪೊಲೀಸ್ ಮುಖ್ಯಸ್ಥ ರಾಮ ಸಮ್ತಮ ಪುತ್ರ ಪ್ರತಿಕ್ರಿಯಿಸಿ, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 23 ಜನರನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.