ಡೊನಾಲ್ಡ್ ಟ್ರಂಪ್‍ | Photo Credit : PTI

ನ್ಯೂಯಾರ್ಕ್: ಬಿಬಿಸಿ ವಿರುದ್ಧದ ತಮ್ಮ 10 ಶತಕೋಟಿ ಡಾಲರ್ ಮಾನನಷ್ಟ ಮೊಕದ್ದಮೆಯಲ್ಲಿ ಡಿಸೆಂಬರ್ 11 ರೊಳಗೆ ನ್ಯಾಯಾಲಯದಲ್ಲಿ ಹಾಜರಾಗಿ ಪುರಾವೆ ಒದಗಿಸುವಂತೆ ಅಮೆರಿಕದ ನ್ಯಾಯಾಧೀಶರು ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಆದೇಶಿಸಿದ್ದಾರೆ. ಹಾಜರಾಗಲು ವಿಫಲವಾದರೆ ಪ್ರಕರಣವನ್ನು ವಜಾಗೊಳಿಸುವುದು ಸೇರಿದಂತೆ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಅಕ್ಟೋಬರ್ 16ರಂದು ನಿಗದಿಯಾಗಿದ್ದ ವಿಚಾರಣೆಗೆ ಹಾಜರಾಗಲು ಟ್ರಂಪ್ ನಿರಾಕರಿಸಿದ್ದಾರೆ ಎಂದು ಬ್ರಿಟಿಷ್ ಪ್ರಸಾರ ಸಂಸ್ಥೆ ಬಿಬಿಸಿ ದೂರು ನೀಡಿದ ನಂತರ, ಮಿಯಾಮಿಯ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ.

ಬಿಬಿಸಿಯು `ಟ್ರಂಪ್: ಎ ಸೆಕೆಂಡ್ ಚಾನ್ಸ್' ಎಂಬ ಸಾಕ್ಷ್ಯಚಿತ್ರವನ್ನು ವಂಚನೆಯಿಂದ ಎಡಿಟ್ ಮಾಡಿ, ಜನವರಿ 6, 2021 ರಂದು ಯುಎಸ್ ಕ್ಯಾಪಿಟಲ್ ಮೇಲಿನ ದಾಳಿಗೆ ತಾವು ಹಿಂಸಾಚಾರವನ್ನು ಪ್ರಚೋದಿಸಿದಂತೆ ಬಿಂಬಿಸಿದೆ ಎಂದು ಟ್ರಂಪ್ ಆರೋಪಿಸಿ ಡಿಸೆಂಬರ್ 2025ರಲ್ಲಿ ಈ ಪ್ರಕರಣವನ್ನು ದಾಖಲಿಸಿದ್ದಾರೆ. ಬಿಬಿಸಿ ಈ ಎಡಿಟಿಂಗ್‍ಗಾಗಿ ಕ್ಷಮೆಯಾಚಿಸಿದ್ದು, ಇದರ ಪರಿಣಾಮವಾಗಿ ಸಂಸ್ಥೆಯ ಹಲವು ಹಿರಿಯ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಆದರೆ, ಸಾಕ್ಷ್ಯಚಿತ್ರವು ಟ್ರಂಪ್ ಅವರಿಗೆ ಯಾವುದೇ ನೈಜ ಹಾನಿಯನ್ನುಂಟುಮಾಡಿದೆ ಎಂಬುದನ್ನು ನಿರಾಕರಿಸಿದೆ ಮತ್ತು ಮೊಕದ್ದಮೆಯನ್ನು ವಜಾಗೊಳಿಸುವಂತೆ ಕೋರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor