Photo Credit : AP 

ಕ್ವಿಟೊ: ಈಕ್ವಡಾರ್‌ನ ಜೈಲುಗಳಲ್ಲಿ ಗುರುವಾರ ನಡೆದ ಗಲಭೆಯಲ್ಲಿ 8 ಜನರು ಮೃತಪಟ್ಟಿದ್ದಾರೆ ಮತ್ತು 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.

ಕೊಟೊಪಾಕ್ಸಿ ಜೈಲಿನಲ್ಲಿ ನಾಲ್ಕು ಕೈದಿಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದರೆ, ಪಿಚಿಂಚಾ ಜೈಲಿನಲ್ಲಿ ನಾಲ್ವರು ಮೃತಪಟ್ಟಿದ್ದಾರೆ . ಈ ಗಲಭೆಗೆ ಕಾರಣರಾದವರನ್ನು ಗುರುತಿಸಲಾಗಿದ್ದು, ಅವರನ್ನು ಗರಿಷ್ಠ ಭದ್ರತೆಯ `ಎಲ್ ಎನ್‍ಕ್ಯೂಯೆಂಟ್ರೊ' ಜೈಲಿಗೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor