ಸಾಂದರ್ಭಿಕ ಚಿತ್ರ | Photo Credit : magnific.com

ಬೀಜಿಂಗ್, ಅ.26: ಚೀನಾವು ಅಕ್ಟೋಬರ್ 26ರಿಂದ ಭಾರತದಲ್ಲಿ ವೀಸಾ ಅರ್ಜಿಗಳು ಮತ್ತು ಕೌನ್ಸುಲರ್ ಕಾನೂನುಬದ್ಧಗೊಳಿಸುವಿಕೆ ಕೋರಿಕೆಗಳನ್ನು ನೇರವಾಗಿ ಸ್ವೀಕರಿಸಿ ಪ್ರಕ್ರಿಯೆಗೊಳಿಸಲಿದೆ. ಇದರೊಂದಿಗೆ ಹೊಸದಿಲ್ಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿದ್ದ ವೀಸಾ ಅರ್ಜಿ ಕೇಂದ್ರಗಳ ಮೂಲಕ ನಡೆಯುತ್ತಿದ್ದ ಸೇವೆಗಳು ಅಂತ್ಯಗೊಂಡಿವೆ.

ಹೊಸದಿಲ್ಲಿಯಲ್ಲಿರುವ ರಾಯಭಾರ ಕಚೇರಿ ಮತ್ತು ಮುಂಬೈನಲ್ಲಿರುವ ಚೀನಾದ ಕಾನ್ಸುಲೇಟ್ ಜನರಲ್ ಅರ್ಜಿಗಳನ್ನು ನೇರವಾಗಿ ನಿರ್ವಹಿಸಲಿವೆ ಎಂದು ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ತಿಳಿಸಿದೆ. ಕೋಲ್ಕತ್ತಾದ ಚೀನಾ ಕಾನ್ಸುಲೇಟ್ ಜನರಲ್ ವ್ಯಾಪ್ತಿಗೆ ಬರುವ ಸೇವೆಗಳನ್ನು ತಾತ್ಕಾಲಿಕವಾಗಿ ಹೊಸದಿಲ್ಲಿಯಲ್ಲಿರುವ ರಾಯಭಾರ ಕಚೇರಿ ನಿರ್ವಹಿಸಲಿದೆ. ಪರಿಷ್ಕೃತ ವ್ಯವಸ್ಥೆಯ ಪ್ರಕಾರ, ಅರ್ಜಿದಾರರು ತಮ್ಮ ಪಾಸ್‌ಪೋರ್ಟ್ ಮತ್ತು ಪೋಷಕ ದಾಖಲೆಗಳನ್ನು ಖುದ್ದಾಗಿ ಸಲ್ಲಿಸುವ ಮೊದಲು ಆನ್‌ಲೈನ್ ಅರ್ಜಿಯನ್ನು ಪೂರ್ಣಗೊಳಿಸಬೇಕಾಗುತ್ತದೆ ಎಂದು ಚೀನಾ ವೀಸಾ ಅರ್ಜಿ ಕೇಂದ್ರ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor