ಡೊನಾಲ್ಡ್ ಟ್ರಂಪ್ | Photo Credit : AP 

ಮಿಚಿಗನ್, ಅ. 26: ತಮಗೆ ನೋಬೆಲ್ ಶಾಂತಿ ಪ್ರಶಸ್ತಿಯನ್ನು ನೀಡದ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ನಾರ್ವೆ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ನಾರ್ವೆಯನ್ನು ‘ಅತ್ಯಂತ ಕಳಪೆ ದೇಶ’ ಎಂದು ಕರೆದಿರುವ ಅವರು, ನಾರ್ವೆಯ ವಲಸಿಗರನ್ನು ಅಮೆರಿಕಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಮಧ್ಯಂತರ ಚುನಾವಣೆಯ ಹಿನ್ನೆಲೆಯಲ್ಲಿ ಮಿಚಿಗನ್‌ನ ಪೋರ್ಟ್ ಹ್ಯುರಾನ್‌ನಲ್ಲಿ ನಡೆದ ರಾಜಕೀಯ ರ‍್ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಫ್ರಾನ್ಸ್‌ನಲ್ಲಿ ಇತ್ತೀಚೆಗೆ ನಡೆದ ಅಶಾಂತಿಗೆ ವಲಸೆಯೇ ಕಾರಣ ಎಂದು ಆರೋಪಿಸಿದರು. ‘ನಾನು ಕೆಲವು ದೇಶಗಳ ವಲಸಿಗರನ್ನು ಸ್ವಾಗತಿಸುತ್ತೇನೆ, ಆದರೆ ನಾರ್ವೆಯವರನ್ನಲ್ಲ. ಏಕೆಂದರೆ ನನಗೆ ನೋಬೆಲ್ ಪ್ರಶಸ್ತಿ ಸಿಗಲಿಲ್ಲ. ಆದ್ದರಿಂದ ನನಗೆ ನಾರ್ವೆಯಿಂದ ಯಾರೂ ಬೇಡ. ನಾರ್ವೆ ವಾಸ್ತವವಾಗಿ ಅತ್ಯಂತ ಕಳಪೆ ದೇಶವಾಗಿದೆ’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor