ಚೀನಾದ ಬಾಗಿಲು ತೆರೆದಿದೆ, ಹೂಡಿಕೆ ಮಾಡಲು ಅಮೆರಿಕದ ಕಂಪೆನಿಗಳಿಗೆ ಸ್ವಾಗತ: ಕ್ಸಿ ಜಿನ್‍ಪಿಂಗ್
ಡೊನಾಲ್ಡ್ ಟ್ರಂಪ್ , ಕ್ಸಿ ಜಿನ್‍ಪಿಂಗ್ | Photo Credit : AP, PTI
ವಾಶಿಂಗ್ಟನ್: ಅಮೆರಿಕಕ್ಕೆ ಮೂರು ದಿನಗಳ ಭೇಟಿಗಾಗಿ ಬುಧವಾರ ಮೇರಿಲ್ಯಾಂಡ್‍ನ ಜಾಯಿಂಟ್ ಬೇಸ್ ಆಂಡ್ರ್ಯೂಸ್ ವಾಯುನೆಲೆಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದ್ಧೂರಿ ಸ್ವಾಗತ ಕೋರಿದರು.
ಬಳಿಕ ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್ `ಈ ಭೇಟಿಯ ಸಮಯದಲ್ಲಿ, ನಾವು ಭದ್ರತೆ, ತಂತ್ರಜ್ಞಾನ ಮತ್ತು ಎಐ ಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತಾಗಿಯೂ ಚರ್ಚಿಸಲಿದ್ದೇವೆ. ಈ ಕ್ಷೇತ್ರಗಳಲ್ಲಿ ನಾವು ಇಂದು ತೆಗೆದುಕೊಳ್ಳುವ ನಿರ್ಧಾರಗಳು ಮುಂಬರುವ ಹಲವು ದಶಕಗಳ ಕಾಲ ಶಾಂತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸಬಹುದು ಎಂದರು.
ಇದೇ ಸಂದರ್ಭ ಮಾತನಾಡಿದ ಕ್ಸಿ ಜಿನ್‍ಪಿಂಗ್ `ಅಮೆರಿಕ ಮತ್ತು ಚೀನಾ ನಡುವಿನ ಸ್ಪರ್ಧೆಯು ಆರೋಗ್ಯಕರವಾಗಿರಬೇಕು ಹಾಗೂ ಮಿತಿಗಳ ಒಳಗೆ ಇರಬೇಕು . ಚೀನಾದ ಬಾಗಿಲು ಸದಾ ತೆರೆದಿರುತ್ತದೆ ಮತ್ತು ದೇಶದಲ್ಲಿ ಹೂಡಿಕೆ ಮಾಡಲು ಅಮೆರಿಕದ ಕಂಪೆನಿಗಳಿಗೆ ಸ್ವಾಗತವಿದೆ ಎಂದು ತಿಳಿಸಿದರು.