ಡೊನಾಲ್ಡ್ ಟ್ರಂಪ್ | Photo Credit : PTI

ವಾಶಿಂಗ್ಟನ್: ಸಿಎನ್‍ಎನ್, ಎಮ್‍ಎಸ್ ನೌ ಮತ್ತು ಪೊಲಿಟಿಕೊ ಮಾಧ್ಯಮ ಸಂಸ್ಥೆಗಳಿಗೆ ಶ್ವೇತಭವನ ಪ್ರವೇಶವನ್ನು ಮರುಸ್ಥಾಪಿಸುವಂತೆ ಅಮೆರಿಕದ ಫೆಡರಲ್ ನ್ಯಾಯಾಧೀಶರು ಗುರುವಾರ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಆದೇಶಿಸಿದ್ದಾರೆ. ಈ ಮೂರು ಸುದ್ದಿ ಸಂಸ್ಥೆಗಳ ಮೇಲೆ ಹೇರಲಾದ ನಿಷೇಧವು ಸಂವಿಧಾನಬಾಹಿರವಾಗುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ತಮ್ಮ ವರದಿಗಾರರನ್ನು ವೈಟ್‍ಹೌಸ್‍ನಿಂದ ಹೊರಗಿಟ್ಟ ನಂತರ ಈ ಮೂರು ಸುದ್ದಿ ಸಂಸ್ಥೆಗಳು ಹೂಡಿದ ಮೊಕದ್ದಮೆಯ ವಿಚಾರಣೆ ನಡೆಸಿದ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಟಿಮ್ ಕೆಲ್ಲಿ ಈ ಆದೇಶ ಹೊರಡಿಸಿದ್ದು ಈ ತೀರ್ಪು ಟ್ರಂಪ್ ಅವರಿಗೆ ಉಂಟಾದ ದೊಡ್ಡ ಹಿನ್ನಡೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor