ಝೆಲೆನ್‍ಸ್ಕಿ | Photo Credit : PTI

ವಿಶ್ವಸಂಸ್ಥೆ: ರಶ್ಯವು ಉಕ್ರೇನ್ ವಿರುದ್ಧದ ತನ್ನ ಯುದ್ಧದಲ್ಲಿ ಭಾರತ, ನೇಪಾಳ ಸೇರಿದಂತೆ 47 ದೇಶಗಳ ಪ್ರಜೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಅವರು ಆರೋಪಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಲವು ವಿದೇಶಿ ಪ್ರಜೆಗಳು ವಂಚನೆಗೆ ಒಳಗಾಗಿ ರಶ್ಯವನ್ನು ತಲುಪಿದ್ದಾರೆ ಎಂದು ಆರೋಪಿಸಿದ್ದು ಸಂಬಂಧಪಟ್ಟ ದೇಶಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ರಶ್ಯದ ಪರ ಉಕ್ರೇನ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಉತ್ತರ ಕೊರಿಯಾದ ಇಬ್ಬರು ಸೈನಿಕರನ್ನು ತಮ್ಮ ಪಡೆ ವಶಕ್ಕೆ ಪಡೆದ ಬಳಿಕ ದಕ್ಷಿಣ ಕೊರಿಯಾಕ್ಕೆ ಹಸ್ತಾಂತರಿಸಿದೆ ಎಂದ ಝೆಲೆನ್‍ಸ್ಕಿ, ರಶ್ಯ ಅಧ್ಯಕ್ಷ ಪುಟಿನ್ ನಿಮ್ಮನ್ನು ಈ ಯುದ್ಧಕ್ಕೆ ಎಳೆಯಲು ಬಿಡಬೇಡಿ ಎಂದು ವಿಶ್ವಸಂಸ್ಥೆಯ ಪ್ರತಿನಿಧಿಗಳಿಗೆ ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor