ಸಾಂದರ್ಭಿಕ ಚಿತ್ರ | Photo Credit : NDTV

ಟೆಲ್ ಅವೀವ್, ಸೆ.24: ವಾರಾಂತ್ಯದಲ್ಲಿ ಗಾಝಾ ನಗರದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‍ನ ಮಿಲಿಟರಿ ವಿಭಾಗದ ಕಮಾಂಡರ್ ಮಹಮೂದ್ ಅಬ್ದುಲ್ -ಫತ್ತಾಹ್ ಅವಾದ್‍ ರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ತಿಳಿಸಿದೆ.

ಯುದ್ಧದ ಸಮಯದಲ್ಲಿ ಗಾಝಾ ನಗರ ಪ್ರದೇಶದ ಭೂಗತ ಸುರಂಗದಲ್ಲಿ ಏಳು ಇಸ್ರೇಲಿ ಒತ್ತೆಯಾಳುಗಳನ್ನು ಬಂಧನದಲ್ಲಿಡುವಲ್ಲಿ ಮಹಮೂದ್ ಅಬ್ದುಲ್ -ಫತ್ತಾಹ್ ಅವಾದ್ ಭಾಗಿಯಾಗಿದ್ದರು. ಇತ್ತೀಚೆಗೆ ಇಸ್ರೇಲಿ ನಾಗರಿಕರು ಮತ್ತು ಐಡಿಎಫ್ ಪಡೆಗಳ ವಿರುದ್ಧ ದಾಳಿಗಳನ್ನು ಯೋಜಿಸುವಲ್ಲಿ ಮತ್ತು ಮುನ್ನೆಡೆಸುವಲ್ಲಿ ನಿರತನಾಗಿದ್ದರು. ಕಣ್ಗಾವಲು ಮತ್ತು ಕದನ ವಿರಾಮವನ್ನು ಸತತವಾಗಿ ಉಲ್ಲಂಘಿಸುವ ಮೂಲಕ ಹಮಾಸ್‍ನ ಸಾಮರ್ಥ್ಯಗಳನ್ನು ಪುನರುಜ್ಜೀವನಗೊಳಿಸಲು ಅವರು ಕೆಲಸ ಮಾಡುತ್ತಿದ್ದ ಎಂದು ಇಸ್ರೇಲ್ ಮಿಲಿಟರಿ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor