×
Ad

ನಾಪತ್ತೆಯಾಗಿದ್ದ ರಷ್ಯಾ ವಿಮಾನದ ಅವಶೇಷ ಪತ್ತೆ : ವಿಮಾನದಲ್ಲಿದ್ದ 50 ಜನರು ಮೃತಪಟ್ಟಿರುವ ಸಾಧ್ಯತೆ

Update: 2025-07-24 13:43 IST

Screengrab:X/@RT_com

ಮಾಸ್ಕೋ : ಆರು ಸಿಬ್ಬಂದಿಗಳು ಸೇರಿದಂತೆ 49 ಜನರನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಪ್ರಯಾಣಿಕ ವಿಮಾನ ಗುರುವಾರ ಪೂರ್ವ ಅಮುರ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ವಿಮಾನದಲ್ಲಿದ್ದ ಎಲ್ಲಾ ಜನರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ರಷ್ಯಾದ ಸುದ್ದಿ ಸಂಸ್ಥೆ TASS ವರದಿ ಮಾಡಿದೆ.

ಸೈಬೀರಿಯಾ ಮೂಲದ ಅಂಗಾರ ಎಂಬ ವಿಮಾನಯಾನ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದ್ದ ವಿಮಾನ, ಚೀನಾದ ಗಡಿಯಲ್ಲಿರುವ ಅಮುರ್ ಪ್ರದೇಶದ ಟಿಂಡಾ ಪಟ್ಟಣದ ಗಮ್ಯಸ್ಥಾನವನ್ನು ಸಮೀಪಿಸುತ್ತಿದ್ದಾಗ ರಾಡಾರ್‌ನಿಂದ ಸಂಪರ್ಕವನ್ನು ಕಳೆದುಕೊಂಡಿತ್ತು. ವಿಮಾನದಲ್ಲಿ ಐವರು ಮಕ್ಕಳು ಸೇರಿದಂತೆ 43 ಪ್ರಯಾಣಿಕರು ಮತ್ತು ಆರು ಮಂದಿ ಸಿಬ್ಬಂದಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News