×
Ad

Venezuelaದಲ್ಲಿ ಅಮೆರಿಕಾದಿಂದ ರಹಸ್ಯ ಅಸ್ತ್ರ ಬಳಕೆ: ಟ್ರಂಪ್

Update: 2026-01-26 22:31 IST

ಡೊನಾಲ್ಡ್ ಟ್ರಂಪ್ | Photo Credit : AP \ PTI

ವಾಷಿಂಗ್ಟನ್, ಜ.26: ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೋರನ್ನು ಸೆರೆ ಹಿಡಿಯಲು ಅಮೆರಿಕಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಎದುರಾಳಿಗಳನ್ನು ‘ದಿಗ್ಭ್ರಮೆಗೊಳಿಸುವ’ ರಹಸ್ಯ ಅಸ್ತ್ರವನ್ನು ಅಮೆರಿಕಾ ಬಳಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ವೆನೆಝುವೆಲಾದ ಪಡೆಗಳ ಬಳಿ ರಷ್ಯ ಮತ್ತು ಚೀನಾದ ರಾಕೆಟ್‌ಗಳಿದ್ದವು. ಆದರೆ ನಮ್ಮ ರಹಸ್ಯ ಅಸ್ತ್ರವನ್ನು ಪ್ರಯೋಗಿಸಿದಾಗ ಅವು ನಿಷ್ಕ್ರಿಯಗೊಂಡವು. ನಾವು ಅಧ್ಯಕ್ಷರ ಅರಮನೆಯೊಳಗೆ ಪ್ರವೇಶಿಸಿದರೂ ಅವರು ರಾಕೆಟ್‌ನ ಬಟನ್ ಒತ್ತುತ್ತಲೇ ಇದ್ದರು. ಆದರೆ ರಾಕೆಟ್‌ಗಳು ನಿಷ್ಕ್ರಿಯವಾಗಿದ್ದವು. ನಾವು ರಾಜಧಾನಿ ಕ್ಯಾರಕಾಸ್‌ನಲ್ಲಿ ಬಹುತೇಕ ಎಲ್ಲಾ ದೀಪಗಳನ್ನೂ ಆರಿಸಿದ್ದೆವು’ ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News