ಗ್ರೀಕ್ ಬಳಿ ವಲಸಿಗರ ದೋಣಿ ಮುಳುಗಿ ಮಹಿಳೆ, ಬಾಲಕ ಮೃತ್ಯು
Update: 2026-01-26 00:24 IST
ಸಾಂದರ್ಭಿಕ ಚಿತ್ರ
ಅಥೆನ್ಸ್, ಜ.25: ಸುಮಾರು 50 ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಗ್ರೀಕ್ ಕರಾವಳಿಯ ಬಳಿ ಮುಳುಗಿ, ಓರ್ವ ಮಹಿಳೆ ಮತ್ತು ಬಾಲಕ ಸಾವನ್ನಪ್ಪಿದ್ದು, ದೋಣಿಯಲ್ಲಿದ್ದ ಇತರ ಮೂವರು ನಾಪತ್ತೆಯಾಗಿದ್ದಾರೆ ಎಂದು ಕರಾವಳಿ ಕಾವಲು ಪಡೆ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಉತ್ತರ ಏಜಿಯನ್ ಸಮುದ್ರದ ಇಕ್ರಿಯಾ ದ್ವೀಪದ ಬಳಿ ಈ ದುರಂತ ಸಂಭವಿಸಿದ್ದು, 50 ವಲಸಿಗರನ್ನು ರಕ್ಷಿಸಲಾಗಿದೆ. ಮಹಿಳೆ ಮತ್ತು ಬಾಲಕನ ಮೃತದೇಹಗಳು ಪತ್ತೆಯಾಗಿವೆ. ಪ್ರಾಥಮಿಕ ಮಾಹಿತಿಯಂತೆ ಕನಿಷ್ಠ ಮೂವರು ನಾಪತ್ತೆಯಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಬಲವಾಗಿ ಬೀಸುತ್ತಿರುವ ಗಾಳಿ ಕಾರ್ಯಾಚರಣೆಗೆ ತೊಡಕಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.