ಚುನಾವಣಾ ಹಸ್ತಕ್ಷೇಪದ ಉದ್ದೇಶದ ಆರೋಪ: ಟ್ರಂಪ್ ಆಡಳಿತದ ಅಧಿಕಾರಿಗಳ ವೀಸಾ ತಡೆದ ಬ್ರೆಝಿಲ್

Update: 2026-07-26 23:10 IST

Photo Credit : ANI

ಬ್ರಸೀಲಿಯ, ಜು. 26: ತಮ್ಮ ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ನಡೆಸುವ ಉದ್ದೇಶದಿಂದ ಭೇಟಿ ನೀಡಲು ಯೋಜಿಸಲಾಗಿತ್ತು ಎಂಬ ಆರೋಪದ ಮೇಲೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಇಬ್ಬರು ಹಿರಿಯ ಅಧಿಕಾರಿಗಳ ವೀಸಾ ಅರ್ಜಿಗಳನ್ನು ಬ್ರೆಝಿಲ್ ತಿರಸ್ಕರಿಸಿದೆ.

ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಮೇಲೆ ರಾಜಕೀಯ ಪ್ರಭಾವ ಬೀರುವ ನೇರ ಯತ್ನವಾಗಿ ಈ ನಿಯೋಗದ ಪ್ರವಾಸದ ರೂಪುರೇಷೆ ಕಂಡುಬಂದಿದೆ ಎಂದು ಬ್ರೆಝಿಲ್ ಸರ್ಕಾರದ ಅಧಿಕಾರಿಗಳು ದೃಢಪಡಿಸಿದ್ದಾರೆ. ವೀಸಾ ನಿರಾಕರಣೆಗೆ ಒಳಗಾದ ಅಧಿಕಾರಿಗಳಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯ ‘ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಕಾರ್ಮಿಕ ವ್ಯವಹಾರಗಳ’ ವಿಭಾಗದ ಸಹಾಯಕ ಕಾರ್ಯದರ್ಶಿ ರೈಲಿ ಎಂ. ಬಾನ್ರ್ಸ್ ಹಾಗೂ ಉಪ ಸಹಾಯಕ ಕಾರ್ಯದರ್ಶಿ ಸ್ಯಾಮ್ಯುಯೆಲ್ ಸ್ಯಾಮ್ಸನ್ ಸೇರಿದ್ದಾರೆ.

ಅಕ್ಟೋಬರ್‌ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಎಡಪಂಥೀಯ ಅಧ್ಯಕ್ಷ ಲೂಯಿಜ್ ಇನಾಶಿಯೊ ಲುಲಾ ಡ'ಸಿಲ್ವಾ ಹಾಗೂ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಪುತ್ರ ಮತ್ತು ಡೊನಾಲ್ಡ್ ಟ್ರಂಪ್ ಅವರ ಆಪ್ತ, ಬಲಪಂಥೀಯ ಸಂಸದ ಫ್ಲೇವಿಯೊ ಬೊಲ್ಸೊನಾರೊ ಮುಖಾಮುಖಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News