ದಾಳಿ ಮತ್ತೆ ಪ್ರಾರಂಭವಾದರೆ ಯುದ್ಧ ಇನ್ನಷ್ಟು ವಿಸ್ತರಿಸಲಿದೆ: ಇರಾನ್ ಎಚ್ಚರಿಕೆ

Update: 2026-07-26 22:12 IST

ಸಾಂದರ್ಭಿಕ ಚಿತ್ರ (AI)

ಟೆಹರಾನ್, ಜು.26: ಇರಾನ್ ಮೇಲೆ ದಾಳಿಗಳನ್ನು ಮುಂದುವರಿಸಲು ಅಮೆರಿಕ ನಿರ್ಧರಿಸಿದರೆ ಪಶ್ಚಿಮ ಏಷ್ಯಾದಲ್ಲಿ ಯುದ್ಧವು ಇನ್ನಷ್ಟು ವಿಸ್ತರಿಸಲಿದೆ ಎಂದು ಇರಾನ್ ಸೇನೆ ರವಿವಾರ ಎಚ್ಚರಿಸಿದೆ.

ಸುಮಾರು ಎರಡು ವಾರಗಳ ತೀವ್ರ ಬಾಂಬ್ ದಾಳಿಯ ನಂತರ ಅಮೆರಿಕ ಮಿಲಿಟರಿಯು ಇರಾನ್ ಮೇಲಿನ ತನ್ನ ವೈಮಾನಿಕ ದಾಳಿಗಳನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ. ಈ ನಡುವೆ ಸಂಘರ್ಷವು ಪೂರ್ಣ ಪ್ರಮಾಣದ ಯುದ್ಧಕ್ಕೆ ತಿರುಗುವುದನ್ನು ತಡೆಯಲು ರಾಜತಾಂತ್ರಿಕ ಪ್ರಯತ್ನಗಳು ಚುರುಕುಗೊಂಡಿವೆ.

ಅಮೆರಿಕದ ದಾಳಿಗಳು ಮತ್ತು ಇದಕ್ಕೆ ಪ್ರತಿಯಾಗಿ ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ನೆಲೆಗಳ ಮೇಲಿನ ಇರಾನ್‌ ನ ಪ್ರತಿದಾಳಿಗಳಲ್ಲಿ ಕಂಡುಬಂದಿರುವ ವಿರಾಮವು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರಯತ್ನಗಳಿಗೆ ಪೂರಕವಾದ ಧನಾತ್ಮಕ ಸಂಕೇತವಾಗಿದೆ ಎಂದು ಮಧ್ಯಸ್ಥಿಕೆ ಪ್ರಯತ್ನ ಮುಂದುವರಿಸಿರುವ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ, ಇರಾನ್ ವಿರುದ್ಧದ ಅಮೆರಿಕ ನೌಕಾಪಡೆಯ ದಿಗ್ಬಂಧನವು ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ರವಿವಾರ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News