ಹಾರ್ಮುಝ್‌ ನಲ್ಲಿ ಸ್ಫೋಟಕಕ್ಕೆ ಡಿಕ್ಕಿಯಾಗಿ ತೈಲ ಟ್ಯಾಂಕರ್ ಸ್ಫೋಟ

Update: 2026-07-26 23:06 IST

ಸಾಂದರ್ಭಿಕ ಚಿತ್ರ | Photo Credit : AP , PTI

ಟೆಹರಾನ್, ಜು.26: ಆಯಕಟ್ಟಿನ ಹಾರ್ಮುಝ್ ಜಲಸಂಧಿಯಲ್ಲಿ ಸಮುದ್ರದ ಸ್ಫೋಟಕಕ್ಕೆ ಡಿಕ್ಕಿ ಹೊಡೆದ ನಂತರ ತೈಲ ಟ್ಯಾಂಕರ್ ಒಂದರಲ್ಲಿ ಸ್ಫೋಟ ಸಂಭವಿಸಿರುವುದಾಗಿ ಇರಾನ್ ಮಾಧ್ಯಮಗಳು ರವಿವಾರ ವರದಿ ಮಾಡಿವೆ.

ಈ ಪ್ರಮುಖ ಜಲಮಾರ್ಗದಲ್ಲಿ ನೌಕಾ ಸಂಚಾರಕ್ಕಾಗಿ ಇರಾನ್ ನಿಗದಿಪಡಿಸಿದ್ದ ಮಾರ್ಗದಿಂದ ಹೊರಬಂದ ನಂತರ ಹಡಗು ಸಮುದ್ರದಡಿಯ ಸ್ಫೋಟಕಕ್ಕೆ ಡಿಕ್ಕಿಯಾಗಿದೆ ಎಂದು ವರದಿ ತಿಳಿಸಿದೆ. ಆದರೆ 'ನಿಯಮ ಉಲ್ಲಂಘಿಸಿದ' ನೌಕೆಯ ಮಾಲೀಕತ್ವ, ತಲುಪಬೇಕಾದ ಸ್ಥಳ ಅಥವಾ ಉಂಟಾದ ಹಾನಿಯ ಪ್ರಮಾಣದ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News