ಭಾರತದ ರೈತರ ಪ್ರತಿಭಟನೆ, ಸಿಎಎ ಪ್ರತಿಭಟನೆ ಕುರಿತ ಸಾಕ್ಷ್ಯಚಿತ್ರ | ಟೊರಂಟೊ ಸಿನೆಮೋತ್ಸವಕ್ಕೆ ಆಯ್ಕೆ

Update: 2024-04-25 17:10 GMT

PC : PTI 

ಟೊರಂಟೊ: ಭಾರತದಲ್ಲಿ ನರೇಂದ್ರ ಮೋದಿ ಸರಕಾರ ಜಾರಿಗೆ ತಂದಿರುವ ಶಾಸನಗಳನ್ನು ವಿರೋಧಿಸುವ ಎರಡು ಪ್ರತಿಭಟನೆಗಳನ್ನು ವಿವರಿಸುವ ಸಾಕ್ಷ್ಯಚಿತ್ರಗಳು ಕೆನಡಾದ ಟೊರಂಟೋದಲ್ಲಿ ನಡೆಯುತ್ತಿರುವ ಸಾಕ್ಷ್ಯಚಿತ್ರೋತ್ಸವ `ಹಾಟ್ ಡಾಕ್ಸ್' ಉತ್ಸವಕ್ಕೆ ಆಯ್ಕೆಗೊಂಡಿರುವ ಭಾರತದ ಕಿರುಚಿತ್ರಗಳಲ್ಲಿ ಸೇರಿವೆ.

ಹಾಟ್ ಡಾಕ್ಸ್‍ನ 31ನೇ ಆವೃತ್ತಿ ಗುರುವಾರ ಆರಂಭಗೊಂಡಿದ್ದು ಮೇ 5ರವರೆಗೆ ನಡೆಯುತ್ತದೆ. ಈ ಸಾಕ್ಷ್ಯಚಿತ್ರೋತ್ಸವದಲ್ಲಿ ಭಾರತದಿಂದ ಪ್ರದರ್ಶನಗೊಳ್ಳಲಿರುವ ಸಾಕ್ಷ್ಯಚಿತ್ರಗಳಲ್ಲಿ ಮೋದಿ ಸರಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆಯನ್ನು ವಿವರಿಸುವ `ಫಾರ್ಮಿಂಗ್ ದಿ ರೆವೊಲ್ಯುಷನ್' ಸಾಕ್ಷ್ಯಚಿತ್ರ ಸೇರಿದೆ. ನಿಷಿತಾ ಜೈನ್ ನಿರ್ದೇಶನ, ಆಕಾಶ್ ಬಸುಮತರಿ ಸಹ ನಿರ್ದೇಶನದ ಈ ಸಾಕ್ಷ್ಯಚಿತ್ರ 2020ರಲ್ಲಿ ಪ್ರತಿಭಟನೆ ಆರಂಭಗೊಂಡಂದಿನಿಂದ ಸರಕಾರವು ಶಾಸನಗಳನ್ನು ರದ್ದುಗೊಳಿಸುವವರೆಗಿನ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲಿದೆ. `ಈ ಪ್ರತಿಭಟನೆಗಳ ಪ್ರಮಾಣವು ಭಾರತದ ಸ್ವಾತಂತ್ರ್ಯ ಚಳವಳಿಯ ಉತ್ಸಾಹವನ್ನು ಪ್ರತಿಧ್ವನಿಸಿತು. ಅನಿರೀಕ್ಷಿತ, ವಿಜಯಶಾಲಿ ಫಲಿತಾಂಶದಲ್ಲಿ ಕೊನೆಗೊಂಡಿತು' ಎಂದು ಹಾಟ್ ಡಾಕ್ಸ್ ಹೇಳಿದೆ.

ಮತ್ತೊಂದು ಸಾಕ್ಷ್ಯಚಿತ್ರ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ನಡೆದ ಪ್ರತಿಭಟನೆಯನ್ನು ವಿವರಿಸಿದೆ. ನೌಶೀನ್ ಖಾನ್ ನಿರ್ದೇಶನದ ಈ ಸಿನೆಮ ಶಾಹೀನ್ ಬಾಗ್‍ನ ಪ್ರತಿಭಟನೆಯನ್ನು ಕೇಂದ್ರೀಕರಿಸಿದೆ. ` ಈ ಸಿನೆಮ ಶಾಹೀನ್‍ಬಾಗ್ ಮಹಿಳೆಯರ ಶಕ್ತಿ ಮತ್ತು ಚೇತರಿಸಿಕೊಳ್ಳುವ ಸಾಮಥ್ರ್ಯವನ್ನು ಪ್ರದರ್ಶಿಸಿದೆ. ಬಹಿಷ್ಕಾರ(ಹೊರಗಿಡುವಿಕೆ), ಧ್ರುವೀಕರಣ ಮತ್ತು ದಬ್ಬಾಳಿಕೆಯ ಮಾನವ ಅನುಭವವನ್ನು ಪರಿಶೋಧಿಸುತ್ತದೆ. ಅವರ ಕಥೆಯು ಆಧುನಿಕ ಭಾರತದಲ್ಲಿ ಸಾರ್ವಜನಿಕ ಭಿನ್ನಾಭಿಪ್ರಾಯದ ಹೊಸ ರೂಪದ ಪ್ರಬಲ ಪೂರ್ವನಿದರ್ಶನವನ್ನು ಒದಗಿಸಿದೆ' ಎಂದು ಹಾಟ್ ಡಾಕ್ಸ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News