×
Ad

ಯುದ್ದನೌಕೆಗಳ ಸಮೂಹ ಇರಾನಿನತ್ತ ಸಾಗುತ್ತಿದೆ: ಡೊನಾಲ್ಡ್ ಟ್ರಂಪ್

Update: 2026-01-23 22:04 IST

Photo Credit : aljazeera.com

ವಾಷಿಂಗ್ಟನ್, ಜ.23: ಇರಾನಿನ ಮೇಲೆ ಒತ್ತಡವನ್ನು ಮುಂದುವರಿಸುವ ಕ್ರಮವಾಗಿ ಅಮೆರಿಕಾದ ಬೃಹತ್ ಯುದ್ದನೌಕೆಗಳ ಸಮೂಹವು ಇರಾನಿನತ್ತ ಸಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ʼಪಡೆಗಳ ಅಗತ್ಯಬಾರದು ಎಂಬ ವಿಶ್ವಾಸವಿದ್ದರೂ ಇರಾನ್ ರಾಷ್ಟ್ರದೊಳಗಿನ ಘಟನೆಗಳು ಅಂತಾರಾಷ್ಟ್ರೀಯ ಪರಿಶೀಲನೆಯನ್ನು ಮುಂದುವರಿಸುತ್ತಿರುವುದರಿಂದ ನೌಕಾಪಡೆ ನಿಯೋಜನೆ ಅಗತ್ಯವಾಗಿದೆ. ನಮ್ಮ ಬಹಳಷ್ಟು ಹಡಗುಗಳು ಆ ದಿಕ್ಕಿನತ್ತ ಸಾಗುತ್ತಿವೆ. ಬಲ ಪ್ರಯೋಗಕ್ಕೆ ಆಸ್ಪದ ನೀಡುವಂತಹ ಘಟನೆ ಸಂಭವಿಸದು ಎಂದು ಆಶಿಸುತ್ತೇವೆ. ಆದರೆ ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ ನೋಡುತ್ತೇವೆ. ಯುದ್ದನೌಕೆಗಳ ಸಮೂಹವು ಆ ದಿಕ್ಕಿನತ್ತ ಸಾಗುತ್ತಿದೆ. ಬಹುಶಃ ಅವುಗಳನ್ನು ನಾವು ಬಳಸಬೇಕಾಗಿಲ್ಲ' ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

ಮುಂದಿನ ದಿನಗಳಲ್ಲಿ ಅಮೆರಿಕದ ವಿಮಾನವಾಹಕ ನೌಕೆ ಯುಎಸ್‍ಎಸ್ ಅಬ್ರಹಾಂ ಲಿಂಕನ್ ಹಾಗೂ ಹಲವಾರು ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕಗಳು ಮಧ್ಯಪ್ರಾಚ್ಯಕ್ಕೆ ಆಗಮಿಸಲಿವೆ. ಹಲವು ನೌಕೆಗಳು ಮಧ್ಯಪ್ರಾಚ್ಯದತ್ತ ಸಾಗುತ್ತಿವೆ ಮತ್ತು ಇರಾನಿನಲ್ಲಿನ ಬೆಳವಣಿಗೆಗಳನ್ನು ಅಮೆರಿಕಾ ನಿಕಟವಾಗಿ ಗಮನಿಸುತ್ತಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News