Pakistan | ಮಾನವ ಹಕ್ಕುಗಳ ಕಾರ್ಯಕರ್ತೆ ಬಂಧನ
Update: 2026-01-23 22:50 IST
ಸಾಂದರ್ಭಿಕ ಚಿತ್ರ | Photo Credit : freepik
ಇಸ್ಲಾಮಾಬಾದ್, ಜ.23: ಇಸ್ಲಾಮಾಬಾದಿನ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಪಾಕಿಸ್ತಾನದ ಪ್ರಮುಖ ಮಾನವ ಹಕ್ಕುಗಳ ಕಾರ್ಯಕರ್ತೆ ಝೈನಾಬ್ ಮಜಾರಿ–ಹಜೀರ್ ಮತ್ತು ಅವರ ಪತಿ, ವಕೀಲ ಹಾದಿ ಅಲಿ ಚಟ್ಟಾ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್ ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ಹಾಜರಾಗಲು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ ದಂಪತಿಯನ್ನು ಬಂಧಿಸಲಾಗಿದೆ. ಪಾಕಿಸ್ತಾನದ ಮಿಲಿಟರಿಯನ್ನು ಕಟುವಾಗಿ ಟೀಕಿಸುತ್ತಿದ್ದ ಝೈನಾಬ್ ಅವರನ್ನು ಬಂಧಿಸಿರುವುದನ್ನು ಅವರ ತಾಯಿ, ಇಮ್ರಾನ್ ಖಾನ್ ಸರಕಾರದಲ್ಲಿ ಸಚಿವರಾಗಿದ್ದ ಡಾ. ಶಿರೀನ್ ಮಜಾರಿ ದೃಢಪಡಿಸಿದ್ದಾರೆ.