×
Ad

ಅಫ್ಘಾನಿಸ್ತಾನ| ಚಂಡಮಾರುತ, ಭೂಕುಸಿತದಲ್ಲಿ 9 ಮಕ್ಕಳು ಮೃತ್ಯು

Update: 2026-01-22 22:34 IST

Photo Credit : mydailyrecord.com

ಕಾಬೂಲ್, ಜ.22: ದಕ್ಷಿಣ ಮತ್ತು ಪೂರ್ವ ಅಫ್ಘಾನಿಸ್ತಾನದಾದ್ಯಂತ ತೀವ್ರ ಚಂಡಮಾರುತದಿಂದ ಹಲವೆಡೆ ಭೂಕುಸಿತ ಸಂಭವಿಸಿದ್ದು ಕನಿಷ್ಠ 9 ಮಕ್ಕಳು ಮೃತಪಟ್ಟಿರುವುದಾಗಿ ವರದಿಯಾಗಿದೆ.

ದಕ್ಷಿಣದ ಕಂದಹಾರ್ ಪ್ರಾಂತದಲ್ಲಿ ಸುಂಟರಗಾಳಿಯೊಂದಿಗೆ ಸುರಿದ ಧಾರಾಕಾರ ಮಳೆಯಿಂದ 6 ಮಕ್ಕಳು ಮೃತಪಟ್ಟಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿದೆ. ಹಲವಾರು ಮನೆಗಳಿಗೆ ಹಾನಿಯಾಗಿದ್ದು ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಪೂರ್ವದ ನೂರಿಸ್ತಾನ್ ಪ್ರಾಂತದ ಖರೈಶ್ ಗ್ರಾಮದಲ್ಲಿ ಮಳೆ, ಸುಂಟರಗಾಳಿಯ ಅಬ್ಬರದಿಂದಾಗಿ ಭೂಕುಸಿತ ಸಂಭವಿಸಿದ್ದು ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟಿದ್ದು ಇತರ ಇಬ್ಬರು ಗಾಯಗೊಂಡಿದ್ದಾರೆ. ಮಧ್ಯ ಅಫ್ಘಾನಿಸ್ತಾನದ ಘಜ್ನಿ ಪ್ರಾಂತದಲ್ಲಿ ಗುರುವಾರ ಬೆಳಗ್ಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ ಸುಮಾರು 31 ಇಂಚಿನಷ್ಟು ಮಳೆ ಸುರಿದಿದ್ದು ಹಲವೆಡೆ ರಸ್ತೆ ತಡೆ ಉಂಟಾಗಿದೆ. ಹಲವು ಪ್ರಾಂತಗಳು ಮತ್ತು ರಾಜಧಾನಿ ಕಾಬೂಲ್‍ನಲ್ಲಿ ದಟ್ಟವಾದ ಮಂಜು ಸುರಿದ ಕಾರಣ ರಸ್ತೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News