×
Ad

ಜಪಾನ್ ಸಂಸತ್ತನ್ನು ವಿಸರ್ಜಿಸಿದ ಪ್ರಧಾನಿ ಸನೇ ಟಕೈಚಿ

Update: 2026-01-23 21:57 IST

ಸನೇ ಟಕೈಚಿ | Photo Credit ; AP \ PTI  

 

ಟೋಕಿಯೊ, ಜ.23: ಜಪಾನ್ ಪ್ರಧಾನಿ ಸನೇ ಟಕೈಚಿ ಶುಕ್ರವಾರ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸುವ ಮೂಲಕ ಫೆಬ್ರವರಿ 8ರ ಕ್ಷಿಪ್ರ ಚುನಾವಣೆಗೆ ದಾರಿ ಮಾಡಿಕೊಟ್ಟಿದ್ದಾರೆ.

465 ಸದಸ್ಯ ಬಲದ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸುವ ಪತ್ರವನ್ನು ಸಂಸತ್ತಿನ ಸ್ಪೀಕರ್ ಓದಿ ಹೇಳಿದಾಗ ಸದಸ್ಯರು ಸ್ವಾಗತಿಸಿದರು. 12 ದಿನಗಳ ಚುನಾವಣಾ ಪ್ರಚಾರ ಕಾರ್ಯಕ್ಕೆ ಮಂಗಳವಾರ ಅಧಿಕೃತ ಚಾಲನೆ ದೊರಕಿದೆ. ದೇಶದ ಮೊದಲ ಮಹಿಳಾ ಪ್ರಧಾನಿಯಾಗಿರುವ ಟಕೈಚಿ ಕೇವಲ ಮೂರು ತಿಂಗಳು ಅಧಿಕಾರದಲ್ಲಿದ್ದು ಕ್ಷಿಪ್ರ ಚುನಾವಣೆ ನಡೆಸುವ ಇಂಗಿತವನ್ನು ಸೋಮವಾರ ವ್ಯಕ್ತಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News