×
Ad

ಮಧ್ಯಪ್ರಾಚ್ಯ ಸಂಘರ್ಷ | ಹಿಂಸಾಚಾರಕ್ಕೆ ಅಂತ್ಯ ಹಾಡಲು ಪೋಪ್ ಲಿಯೋ ಕರೆ; ಮಾತುಕತೆಗೆ ಒತ್ತಾಯ

Update: 2026-03-08 19:54 IST

ಪೋಪ್ ಲಿಯೋ | Photo Credit : AP , PTI 

ವ್ಯಾಟಿಕನ್ ಸಿಟಿ: ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಅಂತ್ಯ ಹಾಡಬೇಕು ಮತ್ತು ಸಮಸ್ಯೆಗಳ ಪರಿಷ್ಕಾರಕ್ಕಾಗಿ ಸಂವಾದಕ್ಕೆ ಅವಕಾಶ ಕಲ್ಪಿಸಬೇಕು ಎಂದು ರೋಮನ್ ಕ್ಯಾಥೋಲಿಕ್ ಚರ್ಚ್ನ ಮುಖ್ಯಸ್ಥ ಪೋಪ್ ಲಿಯೋ ಕರೆ ನೀಡಿದ್ದಾರೆ.

ರವಿವಾರ ರೋಮ್ನ ಸೇಂಟ್ ಪೀಟರ್ಸ್ ಸ್ಕ್ವೇರ್ನಲ್ಲಿ ನಡೆದ ಏಂಜಲಸ್ ಪ್ರಾರ್ಥನೆ ವೇಳೆ ಮಾತನಾಡಿದ ಪೋಪ್ ಲಿಯೋ, ಇರಾನ್ ಹಾಗೂ ಮಧ್ಯಪ್ರಾಚ್ಯದ ವಿವಿಧ ಭಾಗಗಳಿಂದ ಆತಂಕಕಾರಿ ಸುದ್ದಿಗಳು ಬರುತ್ತಿವೆ ಎಂದು ಹೇಳಿದರು.

ಈ ಸಂಘರ್ಷವು ಭಯ ಮತ್ತು ದ್ವೇಷವನ್ನು ಹೆಚ್ಚಿಸುತ್ತಿದ್ದು, ಪರಿಸ್ಥಿತಿ ಇನ್ನಷ್ಟು ವ್ಯಾಪಿಸಬಹುದೆಂಬ ಆತಂಕವನ್ನೂ ಹುಟ್ಟುಹಾಕಿದೆ. ಅದರ ಪರಿಣಾಮವಾಗಿ ‘ಪ್ರಿಯ ಲೆಬನಾನ್’ ಸೇರಿದಂತೆ ಇನ್ನೂ ಹಲವು ದೇಶಗಳು ಈ ಸಂಘರ್ಷಕ್ಕೆ ಎಳೆಯಲ್ಪಡುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.

‘ಬಾಂಬ್ಗಳ ಘರ್ಜನೆ ನಿಲ್ಲಲಿ, ಶಸ್ತ್ರಾಸ್ತ್ರಗಳು ಮೌನವಾಗಲಿ. ಜನರ ಧ್ವನಿ ಕೇಳಿಸಬಹುದಾದಂತೆ ಮಾತುಕತೆಗೆ ದಾರಿ ತೆರೆಯಲಿ ಎಂದು ನಾವು ಭಗವಂತನಿಗೆ ಪ್ರಾರ್ಥಿಸೋಣ’ ಎಂದು ಪೋಪ್ ಲಿಯೋ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News