×
Ad

ಟೆಹರಾನ್‌ನಲ್ಲಿ ತೈಲಾಗಾರಗಳ ಮೇಲೆ ಇಸ್ರೇಲ್ ದಾಳಿ

Update: 2026-03-08 21:16 IST

Photo Credit : aljazeera.com

ಟೆಹರಾನ್,ಮಾ.8: ಇರಾನ್ ವಿರುದ್ಧ ಅಮೆರಿಕ- ಇಸ್ರೇಲ್ ಯುದ್ಧ ಎರಡನೇ ವಾರ ಪ್ರವೇಶಿಸಿರುವಂತೆಯೇ, ಶನಿವಾರ ರಾತ್ರಿ ಇಸ್ರೇಲ್ ,ಇರಾನ್ ರಾಜಧಾನಿ ಟೆಹರಾನ್‌ನಲ್ಲಿರುವ ತೈಲಾಗಾರಗಳ ಮೇಲೆ ದಾಳಿ ನಡೆಸಿದ್ದು, ಪ್ರದೇಶದಲ್ಲಿ ಯುದ್ಧ ಸಂಘರ್ಷ ತಾರಕಕ್ಕೇರಿದೆ. ಐದು ತೈಲಾಗಾರಗಳ ಮೇಲೆ ಇಸ್ರೇಲ್ ದಾಳಿ ನಡೆಸಿರುವುದಾಗಿ ಇರಾನ್‌ಹೇಳಿದೆ. ಇದರ ಜೊತೆಗೆ ನೀರಿನ ನಿರ್ಲವಣೀಕರಣ (ಡಿಸ್ಯಾಲಿನೈಸೇಶನ್ ಪ್ಲ್ಯಾಂಟ್) ಸ್ಥಾವರದ ಮೇಲೂ ಇಸ್ರೇಲ್ ದಾಳಿ ನಡೆಸಿದೆಯೆಂದು ಇರಾನ್ ಆಪಾದಿಸಿದೆ.

ಆದರೆ ಈ ತೈಲಾಗಾರಗಳನ್ನು ಇರಾನ್ ಸೇನೆಯ ಮುೂಲಸೌಕರ್ಯಗಳ ಕಾರ್ಯನಿರ್ವಹಣೆಗಾಗಿ ಬಳಕೆಯಾಗುತ್ತಿತ್ತೆಂದು ಇಸ್ರೇಲ್ ಸೇನೆ ತಿಳಿಸಿದೆ.

ತೈಲಗಾರಗಳು ಹೊತ್ತಿ ಉರಿಯುತ್ತಿರುವುದರಿಂದ ಟೆಹರಾನ್ ನಗರದಾದ್ಯಂತ ದಟ್ಟವಾದ ಕಪ್ಪು ಹೊಗೆ ಆವರಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News