×
Ad

ಜುಲೈ-ಸೆಪ್ಟೆಂಬರ್ ನಲ್ಲಿ ತೀವ್ರಗೊಳ್ಳಲಿದೆ ಎಲ್ ನಿನೋ: ಭಾರತ ಸಹಿತ ವಿಶ್ವದ ವಿವಿಧೆಡೆ ಹವಾಮಾನ ವೈಪರೀತ್ಯ ಸಾಧ್ಯತೆ

Update: 2026-07-03 23:33 IST

Photo Credit: Pexels

ಹೊಸದಿಲ್ಲಿ, ಜು.3: ಎಲ್ನಿನೋ ಜುಲೈ ಹಾಗೂ ಸೆಪ್ಟೆಂಬರ್ ತಿಂಗಳ ನಡುವೆ ತೀವ್ರಗೊಳ್ಳಲಿದ್ದು, ವ್ಯಾಪಕವಾಗಿ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಲಿದೆ ಎಂದು ವಿಶ್ವಸಂಸ್ಥೆಯ ಹವಾಮಾನ ಹಾಗೂ ಪರಿಸರ ಸಂಸ್ಥೆ ಶುಕ್ರವಾರ ಎಚ್ಚರಿಕೆ ನೀಡಿದೆ.

ಎಲ್ನಿನೋ ಈಗಾಗಲೇ ಆರಂಭಗೊಂಡಿದ್ದು, ತ್ವರಿತವಾಗಿ ಶಕ್ತಿಯನ್ನು ಪಡೆದುಕೊಳ್ಳುತ್ತಿದೆ. ವಿಶ್ವದಾದ್ಯಂತ ಅನೇಕ ದೇಶಗಳು ಇದರ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲಿವೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್ನಿನೋ ಎಂಬುದು ನೈಸರ್ಗಿಕ ಹವಾಮಾನಕ್ಕೆ ಸಂಬಂಧಿಸಿದ ವಿದ್ಯಮಾನವಾಗಿದ್ದು, ಪೆಸಿಫಿಕ್ ಸಮುದ್ರದ ಕೇಂದ್ರ ಹಾಗೂ ಪೂರ್ವ ಸಮಭಾಜಕ ವಲಯದಲ್ಲಿ ಮೇಲ್ಮೈ ತಾಪಮಾನವನ್ನು ಹೆಚ್ಚಿಸುತ್ತದೆ. ಇದರಿಂದ ಸಾಗರ ಪ್ರದೇಶದಲ್ಲಿ ವಾಯು ಒತ್ತಡ ಹಾಗೂ ಮಳೆಯ ಪ್ರಮಾಣದಲ್ಲಿ ಭಾರಿ ಬದಲಾವಣೆಗಳು ಉಂಟಾಗುತ್ತವೆ ಎಂದು ವರದಿ ತಿಳಿಸಿದೆ.

ಎಲ್ನಿನೋ ಸಾಮಾನ್ಯವಾಗಿ ಪ್ರತಿ ಎರಡರಿಂದ ಏಳು ವರ್ಷಗಳಿಗೊಮ್ಮೆ ಸಂಭವಿಸುತ್ತದೆ ಮತ್ತು ಅದು ಸುಮಾರು ಒಂಬತ್ತರಿಂದ 12 ತಿಂಗಳುಗಳವರೆಗೆ ಮುಂದುವರಿಯುತ್ತದೆ.

ಕಣ್ಗಾವಲಿನಲ್ಲಿರುವ ಪ್ರಮುಖ ಪ್ರದೇಶಗಳಲ್ಲಿ ಸಮುದ್ರ ಮೇಲ್ಮೈ ತಾಪಮಾನವು 2 ಸೆಂಟಿಗ್ರೇಡ್ಗಿಂತ ಅಧಿಕವಾಗುವ ನಿರೀಕ್ಷೆಯಿದೆ ಎಂದು ಡಬ್ಲ್ಯುಎಂಒ ತಿಳಿಸಿದೆ. ಉತ್ತರ ಗೋಲಾರ್ಧ ಪ್ರದೇಶದಲ್ಲಿ ಎಲ್ನಿನೋ ಬಲಗೊಳ್ಳುವಿಕೆಯು ಮುಂದುವರಿಯಲಿದ್ದು, ಜಗತ್ತಿನಾದ್ಯಂತ ಹಲವು ಪ್ರದೇಶಗಳಲ್ಲಿ ಅದರ ಪ್ರಭಾವ ವಿಸ್ತರಿಸಲಿದೆ ಎಂದು ಸಂಸ್ಥೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News