ಬಾಸ್ನಿಯಾದಲ್ಲಿ EU ಪಡೆಗಳ ಹೆಲಿಕಾಪ್ಟರ್ ಪತನ: ನಾಲ್ವರು ಮೃತ್ಯು
Photo Credit : NDTV
ಸಾರಜೆವೊ: ಬಾಸ್ನಿಯಾದಲ್ಲಿ ಯುರೋಪಿಯನ್ ಒಕ್ಕೂಟದ(ಇಯು) ಶಾಂತಿಪಾಲನಾ ಪಡೆಗೆ ಸೇರಿದ ಹೆಲಿಕಾಪ್ಟರ್ ಗುರುವಾರ ದೇಶದ ಉತ್ತರದ ಪ್ರದೇಶದಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ ಮತ್ತು 11 ಜನರು ಗಾಯಗೊಂಡಿದ್ದಾರೆ ಎಂದು ಪಡೆಗಳ ಪ್ರಕಟಣೆ ತಿಳಿಸಿದೆ.
ಬ್ರಕೊ ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ದಿನನಿತ್ಯದ ತರಬೇತಿಯಲ್ಲಿದ್ದಾಗ ಚಿನೂಕ್ ಹೆಲಿಕಾಪ್ಟರ್ ಪತನಗೊಂಡಿದೆ. ಗಾಯಗೊಂಡವರು ಪ್ರಸ್ತುತ ಸ್ಥಿರ ಸ್ಥಿತಿಯಲ್ಲಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ನಾಗರಿಕ ಮೂಲಸೌಕರ್ಯ, ಆಸ್ತಿ ಅಥವಾ ವಾಹನಗಳಿಗೆ ಹಾನಿಯಾಗಿಲ್ಲ ಮತ್ತು ನಾಗರಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಇಯು ಪಡೆ ತಿಳಿಸಿದೆ.