Photo Credit : X

ಟೆಹರಾನ್: ಹಾರ್ಮುಝ್ ಜಲಸಂಧಿಯಲ್ಲಿ ಸೂಪರ್‌ ಟ್ಯಾಂಕರ್ ಒಂದಕ್ಕೆ ಸಮುದ್ರದಲ್ಲಿ ಅಡಗಿಸಿಟ್ಟಿದ್ದ ಸ್ಫೋಟಕ (ನೌಕಾ ಮೈನ್) ಢಿಕ್ಕಿ ಹೊಡೆದಿದೆ. ಇದರಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಇರಾನ್ ನ IRGC ನೌಕಾಪಡೆ ತಿಳಿಸಿದೆ ಎಂದು Aljazeera ವರದಿ ಮಾಡಿದೆ.

ಅನಧಿಕೃತ ಮಾರ್ಗದಲ್ಲಿ ಸಂಚರಿಸಿದ ಕಾರಣ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಮೂರನೇ ಟ್ಯಾಂಕರ್ ಇದಾಗಿದೆ ಎಂದು ನೌಕಾಪಡೆ ಹೇಳಿದೆ.

ಆದರೆ, ಹಾರ್ಮುಝ್ ಜಲಸಂಧಿಯಲ್ಲಿ ಈ ಹಿಂದೆ ನಡೆದಿದ್ದ ಘಟನೆಯೊಂದರಲ್ಲಿ ಭಾಗಿಯಾಗಿದ್ದ ಟ್ಯಾಂಕರ್ ಗಳ ಪೈಕಿ ಈ ಹಡಗು ಕೂಡ ಇತ್ತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆ ಟ್ಯಾಂಕರ್ ಗಳ ಬಗ್ಗೆ IRGC ನೌಕಾಪಡೆ ಈ ಹಿಂದೆ ಮಾಹಿತಿ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor