ವಿಶ್ವದ ಬಲಾಢ್ಯ ರಾಷ್ಟ್ರಗಳ ‘ಫೋರ್ಬ್ಸ್’ ರ‍್ಯಾಂಕಿಂಗ್ ಪ್ರಕಟ
Photo Credit | timesofindia
ನ್ಯೂಯಾರ್ಕ್: ಅಮೆರಿಕದ ವಾಣಿಜ್ಯ ನಿಯತಕಾಲಿಕ ಫೋರ್ಬ್ಸ್ ಜಗತ್ತಿನ ಅತ್ಯಂತ ಬಲಾಢ್ಯ ರಾಷ್ಟ್ರಗಳ ಪಟ್ಟಿಯನ್ನು ಸೋಮವಾರ ಬಿಡುಗಡೆಗೊಳಿಸಿದ್ದು, ಅಮೆರಿಕವು ಅಗ್ರ ಸ್ಥಾನವನ್ನು ಪಡೆದಿದೆ. ಚೀನಾವು ದ್ವಿತೀಯ ಸ್ಥಾನದಲ್ಲಿದ್ದು, ಇಸ್ರೇಲ್ 10ನೇ ಸ್ಥಾನ ಪಡೆದಿದೆ. ಆದರೆ ಭಾರತಕ್ಕೆ ಟಾಪ್ 10 ನಲ್ಲಿ ಸ್ಥಾನಪಡೆಯಲು ವಿಫಲವಾಗಿದೆ. ಭಾರತವು ಈ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ.
ನಾಯಕತ್ವ, ಆರ್ಥಿಕ ಪ್ರಭಾವ, ರಾಜಕೀಯ ಶಕ್ತಿ, ಅಂತಾರಾಷ್ಟ್ರೀಯ ಮೈತ್ರಿ ಹಾಗೂ ಸೇನಾ ಶಕ್ತಿ ಈ ಐದು ನಿರ್ಣಾಯಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಬಲಾಢ್ಯರಾಷ್ಟ್ರಗಳ ಪಟ್ಟಿಯನ್ನು ತಯಾರಿಸಲಾಗಿದೆ. ದೇಶದ ನಾಯಕತ್ವವು ಹೇಗೆ ಪರಿಣಾಮಕಾರಿಯಾಗಿದೆ ಹಾಗೂ ಜಾಗತಿಕ ಮಟ್ಟದ ನಿರ್ಧಾರಗಳ ಮೇಲೆ ಅವರು ಹೇಗೆ ಪ್ರಭಾವವನ್ನು ಬೀರಬಲ್ಲರು ಎಂಬುದು ರ್ಯಾಂಕಿಂಗ್‌ನ ಪ್ರಮುಖ ಮಾನದಂಡವಾಗಿದೆ.
ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನವು ಬೆಳೆಯುತ್ತಿದೆಯಾದೂ, ಪ್ರಸಕ್ತ ಅಂತಾರಾಷ್ಟ್ರೀಯ ಪ್ರಭಾವ, ರಾಜಕೀಯ ಸವಾಲುಗಳು ಹಾಗೂ ಪ್ರಾದೇಶಿಕ ಸಂಘರ್ಷಗಳು ಅದರ ರ್ಯಾಂಕಿಂಗ್ ಇಳಿಕೆಗೆ ಕಾರಣವೆಂದು ಅವರು ಹೇಳಿದರು.
ಅಮೆರಿಕ, ಚೀನಾ, ರಶ್ಯ, ಬ್ರಿಟನ್, ಜರ್ಮನಿ, ದಕ್ಷಿಣ ಕೊರಿಯ, ಫ್ರಾನ್ಸ್, ಜಪಾನ್, ಸೌದಿ ಆರೇಬಿಯ ಹಾಗೂ ಇಸ್ರೇಲ್, ಪಟ್ಟಿಯಲ್ಲಿ ಕ್ರಮವಾಗಿ ಟಾಪ್ 10 ಸ್ಥಾನಗಳನ್ನು ಆಲಂಕರಿಸಿರುವ ರಾಷ್ಟ್ರಗಳಾಗಿವೆ.
30.34 ಟ್ರಿಲಿಯನ್ ಡಾಲರ್ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೊಂದಿರುವ ಅಮೆರಿಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದೆ. 19.53 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದೆ.
ಅತಿ ದೊಡ್ಡ ಆರ್ಥಿಕತೆ, ಅಗಾಧ ಮಿಲಿಟರಿ ಶಕ್ತಿ ಹಾಗೂ ಬೃಹತ್ ವಿದೇಶಿ ಮೈತ್ರಿಕೂಟದ ಜಾಲ ಹೊಂದಿರುವುದು ಅಮೆರಿಕವು ನಂ.1 ಸ್ಥಾನಕ್ಕೇರಲುಕಾರಣವಾಗಿದೆ. ಜಾಗತಿಕ ಆರ್ಥಿಕತೆಯ ಮೇಲೂ ಅಮೆಅರಿಕವು ಪ್ರಾಬಲ್ಯವನ್ನು ಸ್ಥಾಪಿಸಿದೆ.
1.14 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ಸೌದಿ ಆರೇಬಿಯ ಒಂಭತ್ತನೇ ಸ್ಥಾನವನ್ನು ಪಡೆದಿದೆ. ಸೌದಿ ಆರೇಬಿಯದ ಆಯಕಟ್ಟಿನ ಮೈತ್ರಿಕೂಟಗಳು ಹಾಗೂ ಮಧ್ಯಪ್ರಾಚ್ಯದಲ್ಲಿ ಅದರ ಮಿಲಿಟರಿ ಉಪಸ್ಥಿತಿಯು ಜಾಗತಿಕ ಭೂರಾಜಕೀಯದಲ್ಲಿ ಅದಕ್ಕೆ ಸ್ಥಾನಮಾನವನ್ನು ತಂದುಕೊಟ್ಟಿದೆ. 550.91 ಶತಕೋಟಿ ಡಾಲರ್ ಇಸ್ರೇಲ್ ಸೇನಾ ಸಾಮರ್ಥ್ಯಮತ್ತು ತಂತ್ರಜ್ಞಾನದಲ್ಲಿ ಸಾಧಿಸಿರುವ ಪ್ರಗತಿಯಿಂದಾಗಿ 10ನೇ ಸ್ಥಾನವನ್ನು ಪಡೆಯುವಲ್ಲಿ ಸಫಲವಾಗಿದೆ.