Photo Credit : AP 

ಜೆರುಸಲೆಮ್: ಗಾಝಾದ ಕ್ಲಿನಿಕ್ ವೊಂದರ ಮೇಲೆ ಶನಿವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ತಮ್ಮ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು `ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್' ತಿಳಿಸಿದೆ.

ಈ ಹತ್ಯೆಗಳಿಂದ ತೀವ್ರ ಆಘಾತವಾಗಿದೆ. ನಮ್ಮ ಕಟ್ಟಡಗಳ ಮೇಲೆ ಸಂಸ್ಥೆಯ ಲೋಗೋಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿತ್ತು ಮತ್ತು ಅವುಗಳ ಸ್ಥಳದ ಮಾಹಿತಿಯನ್ನು ಇಸ್ರೇಲ್ ಸೇನೆಗೆ ಮೊದಲೇ ನೀಡಲಾಗಿತ್ತು ಎಂದು ಸಂಸ್ಥೆಯು `ಎಕ್ಸ್' ಖಾತೆಯ ಪೋಸ್ಟ್‌ನಲ್ಲಿ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor