ವ್ಲಾಡಿಮಿರ್‌ ಪುಟಿನ್‌ | Photo Credit : PTI 

ಮಾಸ್ಕೊ, ನ. 27: ರಶ್ಯದ ಸಂಸತ್ತಿನ ಕೆಳಮನೆಯಾದ ‘ಸ್ಟೇಟ್ ಡುಮಾ’ 2027-2029ರ ಅವಧಿಯ ದಾಖಲೆಯ ರಕ್ಷಣಾ ಬಜೆಟ್‌ ಗೆ ಮೂರನೇ ಹಾಗೂ ಅಂತಿಮ ಹಂತದಲ್ಲಿ ಅನುಮೋದನೆ ನೀಡಿದೆ. ಈ ಮೂರು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ರಕ್ಷಣೆಗಾಗಿ 50 ಲಕ್ಷ ಕೋಟಿ ರೂಬಲ್ಗಳಿಗಿಂತಲೂ ಹೆಚ್ಚಿನ ಹಣವನ್ನು (ಸುಮಾರು 56.51 ಲಕ್ಷ ಕೋಟಿ ರೂ.) ಮೀಸಲಿಡುವ ಪ್ರಸ್ತಾವನೆ ಇದಾಗಿದೆ.

ಸೋವಿಯತ್ ಒಕ್ಕೂಟದ ಪತನದ ನಂತರದ ಅತ್ಯಧಿಕ ಮಿಲಿಟರಿ ಹಂಚಿಕೆ ಇದಾಗಿದೆ. 2027ರಲ್ಲಿ ರಶ್ಯದ ಒಟ್ಟು ಫೆಡರಲ್ ವೆಚ್ಚದಲ್ಲಿ ರಕ್ಷಣಾ ವೆಚ್ಚವು ಸುಮಾರು ಶೇ. 35.2ರಷ್ಟು ಪಾಲನ್ನು ಹೊಂದಿರಲಿದೆ. ಇದು ಉಕ್ರೇನ್ ನೊಂದಿಗಿನ ಸಂಘರ್ಷ ಮುಂದುವರಿದಿರುವಂತೆಯೇ ಮಿಲಿಟರಿ ಅಗತ್ಯಗಳಿಗೆ ನೀಡಲಾಗಿರುವ ಹೆಚ್ಚಿನ ಆದ್ಯತೆಯನ್ನು ಎತ್ತಿ ತೋರಿಸುತ್ತದೆ.

ಸ್ಟೇಟ್ ಡುಮಾದಲ್ಲಿ ಅಂಗೀಕಾರಗೊಂಡಿರುವ ಈ ಬಜೆಟ್ ಪ್ರಸ್ತಾವನೆಗೆ ಫೆಡರೇಶನ್ ಕೌನ್ಸಿಲ್ನ ಅನುಮೋದನೆ ಹಾಗೂ ಅಧ್ಯಕ್ಷರ ಸಹಿ ಸೇರಿದಂತೆ ಮುಂದಿನ ಪ್ರಕ್ರಿಯೆಗಳು ಬಾಕಿಯಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor