ಎಲಾನ್ ಮಸ್ಕ್ | Photo Credit : PTI 

ವಾಶಿಂಗ್ಟನ್, ನ. 27: ಅಮೆರಿಕದ ಪ್ರತಿಯೊಂದು ಮಗುವಿಗೂ ತಲಾ ಎರಡು ಸ್ಪೇಸ್ಎಕ್ಸ್ ಷೇರುಗಳನ್ನು ಉಡುಗೊರೆಯಾಗಿ ನೀಡುವ ಯೋಜನೆಯನ್ನು ಎಲಾನ್ ಮಸ್ಕ್ ಘೋಷಿಸಿದ್ದಾರೆ. ಈ ಕೊಡುಗೆಯ ಒಟ್ಟು ಮೌಲ್ಯ ಸುಮಾರು 18 ಶತಕೋಟಿ ಡಾಲರ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸರಣಿ ಪೋಸ್ಟ್ ಗಳನ್ನು ಮಾಡಿರುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮಸ್ಕ್, ಪ್ರತಿ ಮಗುವಿಗೆ ಕಂಪೆನಿಯ ವತಿಯಿಂದ ಒಂದು ಷೇರು ಮತ್ತು ತಮ್ಮ ವೈಯಕ್ತಿಕ ವತಿಯಿಂದ ಮತ್ತೊಂದು ಷೇರು ಸಿಗಲಿದೆ ಎಂದು ತಿಳಿಸಿದ್ದಾರೆ.

ಇದು ಘೋಷಿತ ಯೋಜನೆಯಾಗಿದ್ದು, ಷೇರುಗಳ ವಿತರಣೆಯ ಪ್ರಕ್ರಿಯೆ ಮತ್ತು ದಿನಾಂಕದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor