ಶೇಖ್ ಹಸೀನಾ | Photo Credit : PTI 

ಢಾಕ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸಲು ಭಾರತ ನಿರಾಕರಿಸಿದರೆ, ಬಾಂಗ್ಲಾದೇಶವು ಈ ಬೇಡಿಕೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಕೊಂಡೊಯ್ಯಬಹುದು ಎಂದು ಸಂಸತ್ತಿನ ಸ್ಪೀಕರ್ ಹಫೀಜ್ ಉದ್ದೀನ್ ಅಹ್ಮದ್ ಹೇಳಿದ್ದಾರೆ.

ಬಿಬಿಸಿ ಉರ್ದುವಿನೊಂದಿಗೆ ಮಾತನಾಡಿದ ಅಹ್ಮದ್, ಮಾಜಿ ಪ್ರಧಾನಿಯನ್ನು ಹಸ್ತಾಂತರಿಸಲು ಭಾರತ ವಿಫಲವಾದರೆ ಬಾಂಗ್ಲಾದೇಶವು ಐಸಿಜೆ ಮೊರೆ ಹೋಗಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ, ಹಸೀನಾ ತಕ್ಷಣವೇ ದೇಶಕ್ಕೆ ಮರಳುವ ಸಾಧ್ಯತೆಯನ್ನು ತಳ್ಳಿಹಾಕಿದ ಅವರು, ಡಿಸೆಂಬರ್‌ನಲ್ಲಿ ವಾಪಸಾಗುವುದಾಗಿ ಅವರು ಮಾಡಿರುವ ಘೋಷಣೆಯು ತಮ್ಮ ಬೆಂಬಲಿಗರು ಭರವಸೆ ಕಳೆದುಕೊಳ್ಳದಂತೆ ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಪ್ರತಿಪಾದಿಸಿದ್ದಾರೆ. ಮುಂದಿನ 10 ವರ್ಷಗಳ ಕಾಲ ಹಸೀನಾ ಬಾಂಗ್ಲಾದೇಶಕ್ಕೆ ಮರಳುವುದಿಲ್ಲ. ಹಸೀನಾ ಬಾಂಗ್ಲಾದೇಶಕ್ಕೆ ಮರಳಿದರೆ ಅವರನ್ನು ನೇರವಾಗಿ ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor