ಗಾಝಾ ಒಪ್ಪಂದದ ಮಾತುಕತೆ ತಕ್ಷಣ ಪುನರಾರಂಭಿಸಲು ಸಿದ್ಧ: ಹಮಾಸ್
Update: 2025-06-02 22:58 IST
PC: x.com/WIONews
ಗಾಝಾ: ಗಾಝಾದಲ್ಲಿ ಕದನ ವಿರಾಮಕ್ಕೆ ಪರೋಕ್ಷ ಮಾತುಕತೆಯನ್ನು ತಕ್ಷಣ ಪುನರಾರಂಭಿಸಲು ತಾನು ಸಿದ್ಧ ಎಂದು ಹಮಾಸ್ ಹೇಳಿದೆ.
ವಿವಾದದ ಅಂಶಗಳ ಬಗ್ಗೆ ಒಪ್ಪಂದವನ್ನು ಮಾಡಿಕೊಳ್ಳಲು ನಾವು ತಕ್ಷಣವೇ ಪರೋಕ್ಷ ಮಾತುಕತೆ ನಡೆಸಲು ನಾವು ಸಿದ್ಧವಿದ್ದೇವೆ ಎಂದು ಹಮಾಸ್ ಸಶಸ್ತ್ರ ಹೋರಾಟಗಾರರ ಸಂಘಟನೆಯ ಹೇಳಿಕೆ ತಿಳಿಸಿದೆ. ಈ ಮಧ್ಯೆ, ಗಾಝಾ ಕದನ ವಿರಾಮ ಒಪ್ಪಂದದ ಕುರಿತ ಮಾತುಕತೆಗೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸುವ ಬಗ್ಗೆ ಅಮೆರಿಕದ ಜೊತೆ ಸಮನ್ವಯದೊಂದಿಗೆ ಪ್ರಯತ್ನಗಳನ್ನು ತೀವ್ರಗೊಳಿಸಲಾಗುವುದು' ಎಂದು ಮಧ್ಯಸ್ಥಿಕೆದಾರರಾದ ಖತರ್ ಮತ್ತು ಈಜಿಪ್ಟ್ ಘೋಷಿಸಿವೆ.