ಸಾಂದರ್ಭಿಕ ಚಿತ್ರ (Credit : ANI)

ಯೆಮನ್: ಸೌದಿ ಅರೇಬಿಯಾದ ಖಮಿಸ್ ಮುಶೈತ್‌ನಲ್ಲಿರುವ ಕಿಂಗ್ ಖಾಲಿದ್ ವಾಯುನೆಲೆಯ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಹೌದಿಗಳು ಹೇಳಿದ್ದಾರೆ. ದಾಳಿಯಲ್ಲಿ ತಮ್ಮ ನೇರ ಗುರಿಯನ್ನು ತಲುಪಿರುವುದಾಗಿ ಹೌದಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಸೌದಿ ಅರೇಬಿಯಾ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದಲ್ಲದೆ ದಕ್ಷಿಣ ಕೆಂಪು ಸಮುದ್ರದಲ್ಲಿ ಮತ್ತಷ್ಟು ದ್ವೀಪಗಳನ್ನು ವಶಪಡಿಸಿಕೊಂಡಿರುವುದಾಗಿ ಹೌದಿಗಳು ಹೇಳಿದ್ದಾರೆ. ಇದರಿಂದ ಪ್ರಮುಖ ಸಾಗರ ಮಾರ್ಗವಾದ ಬಾಬ್ ಅಲ್ ಮಂದಬ್ ಜಲಸಂಧಿ ಮೇಲಿನ ತಮ್ಮ ನಿಯಂತ್ರಣ ಮತ್ತಷ್ಟು ಬಲಗೊಂಡಿದೆ ಎಂದು ತಿಳಿಸಿದ್ದಾರೆ.

ಹೌದಿಗಳ ಇತ್ತೀಚಿನ ದಾಳಿಗೆ ಇರಾನ್ ಮತ್ತು ಅದರ ಪ್ರಾದೇಶಿಕ ಮಿತ್ರಪಕ್ಷಗಳು ಬೆಂಬಲ ನೀಡುತ್ತಿವೆ ಎಂದು ಸೌದಿ ಅರೇಬಿಯಾ ಬೆಂಬಲಿತ ಯೆಮನ್ ಸರಕಾರ ಆರೋಪಿಸಿದೆ. ಈ ದಾಳಿಯ ವೇಳೆ ಹೌದಿಗಳು ಮೊಖಾ ಸೇರಿದಂತೆ ಪ್ರಮುಖ ಬಂದರು ಪ್ರದೇಶಗಳನ್ನು ವಶಪಡಿಸಿಕೊಂಡಿದ್ದಾರೆ. ಬಾಬ್ ಅಲ್ ಮಂದಬ್ ಜಲಸಂಧಿಯುದ್ದಕ್ಕೂ ಸಾಗರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಿದ್ದಾರೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor