ಉತ್ತರ ಸಮುದ್ರ ಮಾರ್ಗದ ಬಗ್ಗೆ ಭಾರತ ಸಕ್ರಿಯವಾಗಿ ಚರ್ಚಿಸುತ್ತಿದೆ: ಪುಟಿನ್

Update: 2026-08-13 21:30 IST

ವ್ಲಾಡಿಮಿರ್ ಪುಟಿನ್ | Photo Credit : PTI

ಮಾಸ್ಕೊ, ಆ. 13: ಅಂತರರಾಷ್ಟ್ರೀಯ ಸರಕು ಸಾಗಣೆ ಅಭಿವೃದ್ಧಿಪಡಿಸಲು ರಶ್ಯ ಪ್ರಸ್ತಾಪಿಸಿರುವ ಆರ್ಕ್ಟಿಕ್ ಕಡಲ ಮಾರ್ಗವಾದ ‘ಉತ್ತರ ಸಮುದ್ರ ಮಾರ್ಗ’ದಲ್ಲಿ (NSR) ರಶ್ಯದೊಂದಿಗೆ ಸಹಕರಿಸಲು ಆಸಕ್ತಿ ತೋರುತ್ತಿರುವ ದೇಶಗಳಲ್ಲಿ ಭಾರತವೂ ಸೇರಿದೆ ಎಂದು ರಶ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಅಸ್ತಿತ್ವದಲ್ಲಿರುವ ಅಂತರರಾಷ್ಟ್ರೀಯ ಕಡಲ ಕಾನೂನಿನ ಚೌಕಟ್ಟಿನಲ್ಲೇ ಈ ಸಹಕಾರ ನಡೆಯಲಿದ್ದು, ಈ ಮಾರ್ಗದಲ್ಲಿ ಆಸಕ್ತಿ ಹೊಂದಿರುವ ದೇಶಗಳೊಂದಿಗೆ ಕೆಲಸ ಮಾಡಲು ರಶ್ಯ ಸದಾ ಸಿದ್ಧವಾಗಿದೆ. ಈ ಪಾಲುದಾರರಲ್ಲಿ ಮುಖ್ಯವಾಗಿ ಚೀನಾ, ಭಾರತ ಮತ್ತು ನಮ್ಮೊಂದಿಗೆ ಈ ವಿಷಯಗಳನ್ನು ಸಕ್ರಿಯವಾಗಿ ಚರ್ಚಿಸುತ್ತಿರುವ ಇತರ ದೇಶಗಳು ಸೇರಿವೆ ಎಂದು ಪುಟಿನ್ ಹೇಳಿದ್ದಾರೆ.

ರಶ್ಯದೊಂದಿಗೆ ಸಂಪರ್ಕ ಹೊಂದಿದ ನೌಕೆಗಳನ್ನು ತಡೆಯುವ ಪಾಶ್ಚಿಮಾತ್ಯ ದೇಶಗಳ ನಡವಳಿಕೆಯನ್ನು ಅಂತರರಾಷ್ಟ್ರೀಯ ಕಡಲ ಕಾನೂನಿನ ಉಲ್ಲಂಘನೆ ಎಂದು ಬಣ್ಣಿಸಿದ ಪುಟಿನ್, ಇದು ಕಡಲ್ಗಳ್ಳತನ ಮತ್ತು ದರೋಡೆಯ ಕೃತ್ಯವಾಗಿದ್ದು, ಪೆಸಿಫಿಕ್ ಸೇರಿದಂತೆ ಅಗತ್ಯ ಮತ್ತು ಸೂಕ್ತ ಎಂದು ಭಾವಿಸುವ ಯಾವುದೇ ಪ್ರದೇಶದಲ್ಲಿ ರಶ್ಯ ಪ್ರತ್ಯುತ್ತರ ನೀಡಬಹುದು ಎಂದು ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News