ಅಮೆರಿಕ–ಇಸ್ರೇಲಿ ಗುಪ್ತಚರ ಸಂಸ್ಥೆಗಳೊಂದಿಗೆ ನಂಟು ಹೊಂದಿದ್ದ ಇಬ್ಬರ ಹತ್ಯೆ, ನಾಲ್ವರ ಬಂಧನ; ಇರಾನ್ ಹೇಳಿಕೆ
Update: 2026-08-13 17:01 IST
ಸಾಂದರ್ಭಿಕ ಚಿತ್ರ | Photo Credit : AP
ಟೆಹರಾನ್: ಇರಾನ್ ನ ಆಗ್ನೇಯ ಭಾಗದಲ್ಲಿರುವ ಸಿಸ್ತಾನ್ ಮತ್ತು ಬಲೂಚೆಸ್ತಾನ್ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ, ‘ಅಮೆರಿಕ ಮತ್ತು ಇಸ್ರೇಲಿ ಗುಪ್ತಚರ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದ’ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಇರಾನ್ ನ ಗುಪ್ತಚರ ಸಚಿವಾಲಯ ತಿಳಿಸಿದೆ.
ಇರಾನ್ ನ ಸರಕಾರಿ ಮಾಧ್ಯಮ IRIB ಈ ಕುರಿತು ವರದಿ ಮಾಡಿದೆ.
ಸಿಸ್ತಾನ್ ಮತ್ತು ಬಲೂಚೆಸ್ತಾನ್ ಪ್ರಾಂತ್ಯವನ್ನು ಅಸ್ಥಿರಗೊಳಿಸುವ ಹಾಗೂ ಅಲ್ಲಿನ ಮೂಲಸೌಕರ್ಯಕ್ಕೆ ಹಾನಿ ಮಾಡುವ ಯೋಜನೆಗಳನ್ನು ಕಾರ್ಯಗತಗೊಳಿಸಲು ಇರಾನ್ ನೊಳಗೆ ನುಸುಳಲು ಯತ್ನಿಸಿದ ಆರೋಪದಲ್ಲಿ ಇನ್ನೂ ನಾಲ್ವರನ್ನು ಬಂಧಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಪ್ರಾಂತ್ಯದಲ್ಲಿ ಅಸ್ಥಿರತೆ ಸೃಷ್ಟಿಸುವ ಮತ್ತು ಮೂಲಸೌಕರ್ಯಕ್ಕೆ ಹಾನಿ ಮಾಡುವ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಈ ನಾಲ್ವರು ಇರಾನ್ ಪ್ರವೇಶಿಸಲು ಪ್ರಯತ್ನಿಸಿದ್ದರು ಎಂದು ಸಚಿವಾಲಯ ಆರೋಪಿಸಿದೆ