POK ದಮನ ಖಂಡಿಸಿ ಬ್ರಸೆಲ್ಸ್ ನಲ್ಲಿ ಕಾಶ್ಮೀರಿ ಅನಿವಾಸಿಗಳ ಜಾಥಾ

Update: 2026-08-13 21:30 IST

Photo Credit : x

ಬ್ರಸೆಲ್ಸ್, ಆ. 13: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನದ ಮಿಲಿಟರಿ ದಬ್ಬಾಳಿಕೆಯ ವಿರುದ್ಧ ಜಾಗತಿಕ ಕ್ರಮಕ್ಕೆ ಒತ್ತಾಯಿಸಿ, ಬೆಲ್ಜಿಯಂನಲ್ಲಿರುವ ಕಾಶ್ಮೀರಿ ಅನಿವಾಸಿ ಸಮುದಾಯದ ಸದಸ್ಯರು ಬ್ರಸೆಲ್ಸ್ನ ಯುರೋಪಿಯನ್ ಪಾರ್ಲಿಮೆಂಟ್ ನಿಂದ ವಿಶ್ವಸಂಸ್ಥೆಯ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ದಿನೇ ದಿನೇ ಹದಗೆಡುತ್ತಿರುವ ಪರಿಸ್ಥಿತಿ, ಪ್ರತಿಭಟನಾಕಾರರ ಹತ್ಯೆ, ಬಂಧನ, ಬಲಪ್ರಯೋಗ ಮತ್ತು ಸಂವಹನ ಸೇವೆಗಳ ಮೇಲಿನ ನಿರ್ಬಂಧಗಳ ವಿರುದ್ಧ ಅಂತರರಾಷ್ಟ್ರೀಯ ಗಮನ ಸೆಳೆಯಲು ಈ ಪ್ರತಿಭಟನಾ ಜಾಥಾ ಕೈಗೊಳ್ಳಲಾಯಿತು.

ಪ್ರತಿಭಟನಾಕಾರರು ಪಾಕಿಸ್ತಾನಿ ಭದ್ರತಾ ಪಡೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಸಾಮಾನ್ಯ ನಾಗರಿಕರ ಹತ್ಯೆ, ಬಂಧನಗಳು, ಅತ್ಯಗತ್ಯ ಸೇವೆಗಳ ಮೇಲಿನ ನಿರ್ಬಂಧಗಳು ಮತ್ತು ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಪಿಒಕೆಯಲ್ಲಿ ಕಳೆದ ಕೆಲವು ವಾರಗಳಿಂದ ತೀವ್ರ ಅಶಾಂತಿಯ ವಾತಾವರಣ ನೆಲೆಸಿದ್ದು, ಅಲ್ಲಿನ ಪ್ರತಿಭಟನಾಕಾರರ ಮೇಲಿನ ದೌರ್ಜನ್ಯದ ಬಗ್ಗೆ ಅನಿವಾಸಿ ಸಮುದಾಯಗಳಲ್ಲಿ ಕಳವಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News