×
Ad

ಮತ್ತೆ ದಾಳಿ ನಡೆದರೆ ಬಲವಾದ ತಿರುಗೇಟು: ಅಮೆರಿಕಕ್ಕೆ ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಎಚ್ಚರಿಕೆ

Update: 2026-01-21 22:20 IST

 ಅಬ್ಬಾಸ್ ಆರಾಘ್ಚಿ |  Photo Credit :  AP \ PTI 

ದುಬೈ, ಜ. 21: ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಬುಧವಾರ ಅಮೆರಿಕಕ್ಕೆ ನೇರ ಎಚ್ಚರಿಕೆ ನೀಡಿದ್ದು, ಒಂದು ವೇಳೆ ವಾಷಿಂಗ್ಟನ್ ಮತ್ತೊಮ್ಮೆ ದಾಳಿ ನಡೆಸಿದರೆ ಇಸ್ಲಾಮಿಕ್ ಗಣರಾಜ್ಯವು ತಕ್ಕ ತಿರುಗೇಟು ನೀಡಲಿದೆ ಎಂದು ಹೇಳಿದ್ದಾರೆ.

ಇರಾನ್‌ ನಲ್ಲಿ ಆಡಳಿತ ವಿರೋಧಿ ಪ್ರತಿಭಟನಕಾರರ ಹತ್ಯೆಗಳನ್ನು ಖಂಡಿಸಿ, ಜಾಗತಿಕ ಆರ್ಥಿಕ ವೇದಿಕೆ ದಾವೋಸ್‌ನಲ್ಲಿ ಅಮೆರಿಕದ ಯುದ್ಧವಿಮಾನವಾಹಕ ನೌಕೆ ‘ಅಬ್ರಹಾಂ ಲಿಂಕನ್’ ಏಶಿಯಾದಿಂದ ಮಧ್ಯಪ್ರಾಚ್ಯದತ್ತ ಚಲಿಸುತ್ತಿರುವ ಸಂದರ್ಭದಲ್ಲೇ ಅರಾಘ್ಚಿ ಈ ಹೇಳಿಕೆ ನೀಡಿದ್ದಾರೆ.

ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಅವರು, “ಆಡಳಿತ ವಿರೋಧಿ ಪ್ರತಿಭಟನೆಗಳಿಂದ ಉಂಟಾದ ಅಶಾಂತಿಯ ಹಿಂಸಾತ್ಮಕ ಹಂತವು 72 ತಾಸುಗಳಿಗೂ ಕಡಿಮೆ ಅವಧಿಯಲ್ಲಿ ಅಂತ್ಯಗೊಂಡಿತು. ಈ ಹಿಂಸಾಚಾರಕ್ಕೆ ಸಶಸ್ತ್ರ ಪ್ರತಿಭಟನಕಾರರೇ ಹೊಣೆಗಾರರು” ಎಂದು ಆರೋಪಿಸಿದ್ದಾರೆ.

ಕಳೆದ ವರ್ಷ ಇರಾನ್ ವಿರುದ್ಧ ಇಸ್ರೇಲ್ ನಡೆಸಿದ 12 ದಿನಗಳ ಯುದ್ಧವನ್ನು ಉಲ್ಲೇಖಿಸಿದ ಅರಾಘ್ಚಿ, “2025ರ ಜೂನ್‌ನಲ್ಲಿ ತೋರಿದಂತಹ ಸಂಯಮವನ್ನು ಈ ಬಾರಿ ಇರಾನ್ ಪ್ರದರ್ಶಿಸುವುದಿಲ್ಲ. ಪ್ರತಿದಾಳಿ ನಡೆಸುವಲ್ಲಿ ನಮ್ಮ ಬಲಿಷ್ಠ ಸಶಸ್ತ್ರ ಪಡೆಗಳು ಯಾವುದೇ ದಾಕ್ಷಿಣ್ಯ ತೋರಿಸುವುದಿಲ್ಲ” ಎಂದು ಲೇಖನದಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News