×
Ad

ಗಾಝಾ ‘ಶಾಂತಿ ಸಮಿತಿ’ಗೆ ಸೇರಲು ಪುಟಿನ್‌ಗೆ ಟ್ರಂಪ್ ಆಹ್ವಾನ!

Update: 2026-01-19 23:18 IST

ಡೊನಾಲ್ಡ್ ಟ್ರಂಪ್ (File Photo: PTI)

ವಾಶಿಂಗ್ಟನ್: ಜಾಗತಿಕ ಸಂಘರ್ಷಗಳನ್ನು ಪರಿಹರಿಸುವ ಹಾಗೂ ಗಾಝಾದ ಆಡಳಿತ ಮತ್ತು ಪುನರ್ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುವ ಉದ್ದೇಶ ಹೊಂದಿದೆ ಎನ್ನಲಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ‘‘ಶಾಂತಿ ಸಮಿತಿ’’ಗೆ ಸೇರುವಂತೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಆಹ್ವಾನ ನೀಡಲಾಗಿದೆ.

ರಶ್ಯವು ನಾಲ್ಕು ವರ್ಷಗಳಿಂದ ಉಕ್ರೇನ್ ವಿರುದ್ಧ ನಡೆಸುತ್ತಿರುವ ಯುದ್ಧ ಇನ್ನೂ ಮುಂದುವರಿದಿದೆ ಹಾಗೂ ಶಾಂತಿ ಒಪ್ಪಂದ ಮರೀಚಿಕೆಯಾಗಿಯೇ ಉಳಿದಿದೆ. ಇದರ ಹೊರತಾಗಿಯೂ ರಶ್ಯ ಅಧ್ಯಕ್ಷರಿಗೆ ಶಾಂತಿ ಸಮಿತಿಯ ಸದಸ್ಯರಾಗಲು ಆಹ್ವಾನ ನೀಡಲಾಗಿದೆ.

ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರಶ್ಯ- ಉಕ್ರೇನ್ ಯುದ್ಧವನ್ನು ನಿಲ್ಲಿಸುವುದಾಗಿ ಟ್ರಂಪ್ ಹೇಳಿದ್ದರು. ಆದರೆ, ಈಗ ಅವರು ಅಧಿಕಾರಕ್ಕೆ ಬಂದು ಒಂದು ವರ್ಷವೇ ಕಳೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News