×
Ad

ಇರಾನ್| ಬಾಂಬ್ ಅವಶೇಷಗಳ ಸ್ಫೋಟದಲ್ಲಿ 14 ಮಂದಿ ಐಆರ್‌ಜಿಸಿ ಸದಸ್ಯರು ಮೃತ್ಯು

Update: 2026-05-02 20:53 IST

ಸಾಂದರ್ಭಿಕ ಚಿತ್ರ

ಟೆಹರಾನ್, ಮೇ 2: ಇರಾನ್‍ನ ವಾಯವ್ಯ ಜಂಜಾನ್ ಪ್ರಾಂತದಲ್ಲಿ ಯುದ್ಧದ ಸಮಯದಲ್ಲಿ ಸ್ಫೋಟಗೊಳ್ಳದ ಬಾಂಬ್‍ಗಳನ್ನು ತೆರವುಗೊಳಿಸುವಾಗ ಸಂಭವಿಸಿದ ಸ್ಫೋಟದಲ್ಲಿ ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ)ನ 14 ಸದಸ್ಯರು ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

`ಶತ್ರುಗಳು ನಡೆಸಿದ್ದ ಕ್ಲಸ್ಟರ್ ಬಾಂಬ್ ಹಾಗೂ ವೈಮಾನಿಕ ದಾಳಿಯ ಸಂದರ್ಭ, ಸುಮಾರು 1,200 ಹೆಕ್ಟೇರ್ ಕೃಷಿ ಜಮೀನು ಸೇರಿದಂತೆ ಜಂಜಾನ್ ಪ್ರಾಂತದ ಕೆಲವು ಭಾಗಗಳು ಬಾಂಬ್‍ಗಳಿಂದ ಜರ್ಝರಿತಗೊಂಡವು. ಈ ಪ್ರದೇಶದಲ್ಲಿ ಐಆರ್‌ಜಿಸಿ ವಿಶೇಷ ಪಡೆಯು 15,000ಕ್ಕೂ ಹೆಚ್ಚು ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿವೆ. ಈ ಸಂದರ್ಭ ನಡೆದ ಸ್ಫೋಟದಲ್ಲಿ 14 ಸದಸ್ಯರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಫಾರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಇಸ್ರೇಲ್ ಮತ್ತು ಅಮೆರಿಕ ಕ್ಲಸ್ಟರ್ ಶಸ್ತ್ರವನ್ನು ಬಳಸುತ್ತಿವೆ ಎಂದು ಇರಾನ್ ಈ ಹಿಂದೆ ಆರೋಪಿಸಿದೆ. ಕ್ಲಸ್ಟರ್ ಬಾಂಬ್‍ಗಳು ಆಗಸದ ಮಧ್ಯದಲ್ಲಿ ಸ್ಫೋಟಗೊಂಡು ಹಲವಾರು ಸಣ್ಣ ಬಾಂಬ್‍ಗಳನ್ನು ಚದುರಿಸುತ್ತದೆ. ಅವುಗಳಲ್ಲಿ ಕೆಲವು ಸ್ಫೋಟಿಸಲು ವಿಫಲವಾಗಿ ದೀರ್ಘ ಕಾಲದವರೆಗೆ ಉಳಿಯಬಹುದಾದ ಅಪಾಯವನ್ನು ಸೃಷ್ಟಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News