ಜೋರ್ಡಾನ್ ನಲ್ಲಿನ ಅಲ್-ಅಝ್ರಾಕ್ ವಾಯುನೆಲೆ ಮೇಲೆ ಇರಾನ್‌ನಿಂದ ಕ್ಷಿಪಣಿ ದಾಳಿ: IRGC ಮಾಹಿತಿ
ಸಾಂದರ್ಭಿಕ ಚಿತ್ರ
ಟೆಹ್ರಾನ್ : ಜೋರ್ಡಾನ್‌ನಲ್ಲಿರುವ ಅಮೆರಿಕದ ಅಲ್-ಅಝ್ರಾಕ್ ವಾಯುನೆಲೆ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಿರುವುದಾಗಿ ಇರಾನ್‌ನ ಐಆರ್‌ಜಿಸಿ ಹೇಳಿಕೆ ನೀಡಿದೆ.
ಅಮೆರಿಕದ ಫೈಟರ್ ಜೆಟ್ ಶೆಲ್ಟರ್‌ಗಳು ಮತ್ತು ದೊಡ್ಡ ವಿಮಾನ ನಿಲುಗಡೆ ಪ್ರದೇಶವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಅಮೆರಿಕದ ಕನಿಷ್ಠ ಎರಡು ಯುದ್ಧವಿಮಾನಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಹಲವು ವಿಮಾನಗಳಿಗೆ ಗಮನಾರ್ಹವಾದ ಹಾನಿಯಾಗಿದೆ ಎಂದು ಐಆರ್‌ಜಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಇದೇ ವೇಳೆ, ಜೋರ್ಡಾನ್ ಸೇನೆ ಕೂಡ ಅಮೆರಿಕದ ಪಡೆಗಳನ್ನು ಗುರಿಯಾಗಿಸಬೇಕು ಎಂದು ಐಆರ್‌ಜಿಸಿ ಕರೆ ನೀಡಿದೆ.
"ಜೋರ್ಡಾನ್‌ನ ಪವಿತ್ರ ನೆಲವನ್ನು ಅಮಾಯಕ ಮುಸ್ಲಿಮರ ಹಂತಕರಿಂದ ಮುಕ್ತಗೊಳಿಸುವುದು ಮತ್ತು ಅಗತ್ಯವಿರುವ ಯಾವುದೇ ಮಾರ್ಗವನ್ನು ಬಳಸಿಕೊಂಡು ಅವರನ್ನು ನಿರ್ಮೂಲನೆ ಮಾಡುವುದು ನಿಮ್ಮ ಧಾರ್ಮಿಕ ಹಾಗೂ ಮಾನವೀಯ ಕರ್ತವ್ಯವಾಗಿದೆ" ಎಂದು ಐಆರ್‌ಜಿಸಿ ಹೇಳಿಕೆಯಲ್ಲಿ ತಿಳಿಸಿದೆ.