ಬ್ರಿಟನ್ | ಲೇಬರ್ ಪಕ್ಷದ ನಾಯಕರಾಗಿ ಬರ್ನ್‍ಹ್ಯಾಮ್ ಆಯ್ಕೆ
Update: 2026-07-17 22:12 IST
ಬರ್ನ್‍ಹ್ಯಾಮ್ | Photo Credit :AP
ಲಂಡನ್, ಜು.17: ಬ್ರಿಟನ್‍ನ ಆಡಳಿತಾರೂಢ ಲೇಬರ್ ಪಕ್ಷದ ನೂತನ ನಾಯಕರಾಗಿ ಆಂಡಿ ಬರ್ನ್‍ಹ್ಯಾಮ್ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ರಾಜಕೀಯ ಅಸ್ಥಿರತೆಯ ನಂತರ, ಪ್ರಸ್ತುತ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಸ್ಥಾನವನ್ನು ತುಂಬಲಿರುವ ಅವರು ಸೋಮವಾರದಂದು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ತಾವು ದೇಶದಲ್ಲಿ ಮತ್ತೊಮ್ಮೆ ಭರವಸೆ"ಯನ್ನು ಮೂಡಿಸುವುದಾಗಿ ಮತ್ತು ಸಾಮಾನ್ಯ ಜನರಿಗೆ ಸಹಕಾರಿಯಾಗದ ಇಂದಿನ ವ್ಯವಸ್ಥೆಯನ್ನು ಬದಲಾಯಿಸಲು ಶ್ರಮಿಸುವುದಾಗಿ ಬರ್ನ್‍ಹ್ಯಾಮ್ ತಿಳಿಸಿರುವುದಾಗಿ ಸಿಎನ್‍ಎನ್ ವರದಿ ಮಾಡಿದೆ.