×
Ad

ರಮಲ್ಲಾದಲ್ಲಿ ಅರಬ್ ರಾಷ್ಟ್ರಗಳ ಸಭೆಗೆ ಇಸ್ರೇಲ್ ತಡೆ: ವರದಿ

Update: 2025-05-31 21:52 IST

PC : X 

ಜೆರುಸಲೇಂ: ಆಕ್ರಮಿತ ಪಶ್ಚಿಮದಂಡೆಯಲ್ಲಿನ ಫೆಲೆಸ್ತೀನ್‌ ನ ಆಡಳಿತಾತ್ಮಕ ರಾಜಧಾನಿ ರಮಲ್ಲಾದಲ್ಲಿ ಅರಬ್ ರಾಷ್ಟ್ರಗಳ ಯೋಜಿತ ಸಭೆ ನಡೆಸಲು ಇಸ್ರೇಲ್ ಅವಕಾಶ ನೀಡುವುದಿಲ್ಲ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

ಜೋರ್ಡಾನ್, ಈಜಿಪ್ಟ್, ಸೌದಿ ಅರೆಬಿಯಾ, ಖತರ್ ಮತ್ತು ಯುಎಇ ದೇಶಗಳ ನಿಯೋಗವು ರಮಲ್ಲಾಗೆ ಭೇಟಿ ನೀಡಿ ಫೆಲೆಸ್ತೀನ್ ಅಧಿಕಾರಿಗಳನ್ನು ಭೇಟಿ ಮಾಡುವುದನ್ನು ತಡೆಯಲು ನಿರ್ಧರಿಸಲಾಗಿದೆ. ವೆಸ್ಟ್ ಬ್ಯಾಂಕ್‍ ಗೆ ಪ್ರಯಾಣಿಸಲು ಸಚಿವರು ಇಸ್ರೇಲ್ ನ ಒಪ್ಪಿಗೆ ಪಡೆಯಬೇಕು ಎಂದು ಅಧಿಕಾರಿ ಹೇಳಿದ್ದಾರೆ.

ನಿಯೋಗವು ಫೆಲೆಸ್ತೀನಿಯನ್ ದೇಶ ಸ್ಥಾಪನೆಯನ್ನು ಉತ್ತೇಜಿಸುವ ಬಗ್ಗೆ ಚರ್ಚಿಸಲು `ಪ್ರಚೋದನಕಾರಿ ಸಭೆಯಲ್ಲಿ' ಭಾಗವಹಿಸಲು ನಿಯೋಗ ಉದ್ದೇಶಿಸಿದೆ. ಇಸ್ರೇಲ್ ನ ಹೃದಯಭಾಗದಲ್ಲಿ ಇಂತಹ ರಾಷ್ಟ್ರವು ನಿಸ್ಸಂದೇಹವಾಗಿ ಭಯೋತ್ಪಾದಕ ರಾಷ್ಟ್ರವಾಗಲಿದೆ. ತನ್ನ ಭದ್ರತೆಗೆ ಹಾನಿಯುಂಟು ಮಾಡುವ ಉದ್ದೇಶ ಹೊಂದಿರುವ ಇಂತಹ ಕ್ರಮಗಳಿಗೆ ಇಸ್ರೇಲ್ ಸಹಕರಿಸುವುದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ರಮಲ್ಲಾಗೆ ಅರಬ್ ನಿಯೋಗದ ಭೇಟಿ ಮತ್ತು ಫೆಲೆಸ್ತೀನ್ ಅಧಿಕಾರಿಗಳೊಂದಿಗೆ ಸಭೆಯನ್ನು ತಡೆಯುವ ಇಸ್ರೇಲ್ ನ ನಿರ್ಧಾರವು ಇಸ್ರೇಲ್ ನ ಬಾಧ್ಯತೆಯ ಸ್ಪಷ್ಟ ಉಲ್ಲಂಘನೆಯನ್ನು ಪ್ರತಿಬಿಂಬಿಸಿದೆ' ಎಂದು ಜೋರ್ಡಾನ್ ವಿದೇಶಾಂಗ ಸಚಿವರು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News