ಅಮೆರಿಕ ಮಾಡಿದ್ದನ್ನೇ ಇಸ್ರೇಲ್ ಮಾಡಿದೆ: ಖತರ್ ದಾಳಿಗೆ ನೆತನ್ಯಾಹು ಸಮರ್ಥನೆ
Update: 2025-09-11 22:35 IST
ಬೆಂಜಮಿನ್ ನೆತನ್ಯಾಹು | NDTV
ಟೆಲ್ ಅವೀವ್, ಸೆ.11: ಅಮೆರಿಕದ ಮೇಲೆ ನಡೆದ 9/11ರ ದಾಳಿಗೆ ಅಲ್ ಖೈದಾದ ಮೇಲೆ ಪ್ರತೀಕಾರ ತೀರಿಸಿಕೊಂಡ ಹಾಗೆಯೇ ಖತರ್ ನಲ್ಲಿದ್ದ ಹಮಾಸ್ ನಿಯೋಗವನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಪಾದಿಸಿದ್ದಾರೆ.
ಭಯೋತ್ಪಾದಕರಿಗೆ ಆಶ್ರಯ ನೀಡುವ ಖತರ್ ಹಾಗೂ ಇತರ ದೇಶಗಳು ಅವರನ್ನು ಹೊರಹಾಕಬೇಕು ಅಥವಾ ಶಿಕ್ಷೆ ವಿಧಿಸಬೇಕು. ನೀವು ಮಾಡದಿದ್ದರೆ ನಾವು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಖತರ್ ಹಮಾಸ್ ಸದಸ್ಯರಿಗೆ ಸುರಕ್ಷಿತ ಆಶ್ರಯ ತಾಣವಾಗಿದೆ. 9/11ರ ದಾಳಿಯ ಬಳಿಕ ಅಫ್ಘಾನಿಸ್ತಾನದಲ್ಲಿ ಅಲ್ ಖೈದಾ ಉಗ್ರರನ್ನು ಬೆನ್ನಟ್ಟಿದ ಅಮೆರಿಕ ಲಾದೆನ್ ನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಿತ್ತು. ಇದನ್ನೇ ನಾವೂ ಮಾಡಿದ್ದೇವೆ. ನಮ್ಮನ್ನು ಖಂಡಿಸುವ ರಾಷ್ಟ್ರಗಳಿಗೆ ನಾಚಿಕೆಯಾಗಬೇಕು ಎಂದು ವೀಡಿಯೊ ಸಂದೇಶದಲ್ಲಿ ನೆತನ್ಯಾಹು ಹೇಳಿದ್ದಾರೆ.