×
Ad

ಅಮೆರಿಕ–ಇರಾನ್ ಮಾತುಕತೆ ಹಳಿತಪ್ಪಿಸಲು ಇಸ್ರೇಲ್ ಅಧಿಕಾರಿಗಳ ಯತ್ನ: ವ್ಯಾನ್ಸ್ ಆರೋಪ

Update: 2026-07-16 22:40 IST

 ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ | Photo Credit : PTI

ವಾಶಿಂಗ್ಟನ್, ಜು.16: ಇರಾನ್ ಜೊತೆಗಿನ ಅಮೆರಿಕದ ರಾಜತಾಂತ್ರಿಕ ಪ್ರಯತ್ನಗಳನ್ನು ಹಳಿತಪ್ಪಿಸಲು ಇಸ್ರೇಲ್ ಸರ್ಕಾರದೊಳಗಿನ ಕೆಲವು ಶಕ್ತಿಗಳು ಯತ್ನಿಸುತ್ತಿವೆ. ಯುದ್ಧವು ಶಾಶ್ವತವಾಗಿ ಮುಂದುವರಿಯಬೇಕೆಂದು ಅವರು ಬಯಸುತ್ತಿದ್ದಾರೆ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಆರೋಪಿಸಿದ್ದಾರೆ.

ಮಾತುಕತೆಗಳಿಂದ ಅಮೆರಿಕವನ್ನು ದೂರ ಸರಿಸಲು ಇಸ್ರೇಲ್ ಸರ್ಕಾರದೊಳಗಿನ ಕೆಲವರು ಕೆಲಸ ಮಾಡಿದ್ದಾರೆ ಎಂಬುದು ತಮಗೆ ಖಚಿತವಾಗಿ ತಿಳಿದಿದೆ ಎಂದು `ಜೋ ರೊಗಾನ್ ಎಕ್ಸ್ಪೀರಿಯನ್ಸ್' ಪಾಡ್ಕಾಸ್ಟ್ನಲ್ಲಿ ವ್ಯಾನ್ಸ್ ಆರೋಪಿಸಿದ್ದಾರೆ. ವಿದೇಶಿ ಸರ್ಕಾರಗಳು ಅಮೆರಿಕದ ನೀತಿಗಳನ್ನು ರೂಪಿಸಲು ಸಾಮಾನ್ಯವಾಗಿ ಪ್ರಯತ್ನಿಸುತ್ತವೆ. ಆದರೆ, ಅಮೆರಿಕದ ನಾಯಕರು ಇಂತಹ ಪ್ರಯತ್ನಗಳಿಗೆ ಮಣಿದು ತಮ್ಮ ವಿವೇಚನೆಯನ್ನು ಕಳೆದುಕೊಂಡಾಗ ಸಮಸ್ಯೆ ಎದುರಾಗುತ್ತದೆ ಎಂದು ಅವರು ಒತ್ತಿಹೇಳಿದ್ದಾರೆ.

ಆದರೆ, ಇಡೀ ಇಸ್ರೇಲ್ ಸರ್ಕಾರವೇ ರಾಜತಾಂತ್ರಿಕತೆಯನ್ನು ವಿರೋಧಿಸುತ್ತಿದೆ ಎಂದು ತಾನು ಆರೋಪಿಸುತ್ತಿಲ್ಲ. ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವ ಟ್ರಂಪ್ ಅವರ ನಿರ್ಧಾರಕ್ಕೆ ಇಸ್ರೇಲ್ ಕಾರಣವಲ್ಲ ಎಂದು ವ್ಯಾನ್ಸ್ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News