×
Ad

FBI 'ಮೋಸ್ಟ್ ವಾಂಟೆಡ್' ಅಪರಾಧಿಗಳ ಪಟ್ಟಿಗೆ ನಿತೀಶ್ ಕೌಶಲ್ ಸೇರ್ಪಡೆ

Update: 2026-07-16 00:20 IST

ವಾಶಿಂಗ್ಟನ್, ಜು.15: ಭಾರತೀಯ ಮೂಲದ ನಿತೀಶ್ ಕೌಶಲ್‌ನನ್ನು ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (FBI) 'ಮೋಸ್ಟ್ ವಾಂಟೆಡ್' ಅಪರಾಧಿಗಳ ಪಟ್ಟಿಗೆ ಸೇರ್ಪಡೆಗೊಳಿಸಿದೆ.

ಜಗ್ಗು ಭಗವಾನ್‌ಪುರಿಯಾ ಗ್ಯಾಂಗ್‌ ಗೆ ಸಂಬಂಧಿಸಿದ ಕೊಲೆ, ಅಪಹರಣ, ಮಾದಕ ದ್ರವ್ಯ ಸಾಗಣೆ ಮತ್ತು ಇತರ ಸಂಘಟಿತ ಅಪರಾಧ ಚಟುವಟಿಕೆಗಳಲ್ಲಿ ಈ ಭಾರತೀಯ ಪ್ರಜೆಯ ಪಾತ್ರವಿದೆ ಎಂದು ಆರೋಪಿಸಲಾಗಿದೆ.

'ಭಗವಾನ್‌ಪುರಿಯಾ ಗ್ಯಾಂಗ್ ಭಾರತದ ಪಂಜಾಬ್‌ನಲ್ಲಿ ಉಗಮಗೊಂಡು, ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್ ಹಾಗೂ ಇತರ ಕಡೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಂತರರಾಷ್ಟ್ರೀಯ ಅಪರಾಧ ಸಂಸ್ಥೆಯಾಗಿದೆ' ಎಂದು ಅಮೆರಿಕದ ತನಿಖಾಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News