×
Ad

ಹಫೀಝ್ ಬೆಂಬಲಕ್ಕೆ ನಿಂತ ಪಾಕಿಸ್ತಾನ; ಪಹಲ್ಗಾಮ್ ದಾಳಿ ತನಿಖೆ ತಿರಸ್ಕಾರ

Update: 2026-07-16 22:20 IST

ಹಫೀಜ್ ಸಯೀದ್ | Photo Credit : NDTV 

ಇಸ್ಲಾಮಾಬಾದ್, ಜು.16: ವಿಶ್ವಸಂಸ್ಥೆಯಿಂದ ನಿಷೇಧಿತ ಉಗ್ರ ಎಂದು ಘೋಷಿಸಲ್ಪಟ್ಟಿರುವ ಹಫೀಝ್ ಸಯೀದ್ ಪರವಾಗಿ ಪಾಕಿಸ್ತಾನವು ಅಧಿಕೃತ ರಾಜತಾಂತ್ರಿಕ ರಕ್ಷಣೆಗೆ ಮುಂದಾಗಿದೆ. ಪಹಲ್ಗಾಮ್ ಉಗ್ರರ ದಾಳಿಯ ಕುರಿತಾದ ಭಾರತದ ತನಿಖೆಯನ್ನು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಹಿರಂಗವಾಗಿ ತಿರಸ್ಕರಿಸಿದ್ದು, ಲಷ್ಕರ್-ಎ-ತಯ್ಯಬ್ಬ (LET) ಸಂಸ್ಥಾಪಕನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಲ್ಲಿಸಿರುವ ಇತ್ತೀಚಿನ ಚಾರ್ಜ್ಶೀಟ್ ಅನ್ನು ತಳ್ಳಿಹಾಕಿದೆ.

ಪಹಲ್ಗಾಮ್ ಉಗ್ರರ ದಾಳಿಗೆ ಸಂಬಂಧಿಸಿದಂತೆ ಹಫೀಝ್ ಸಯೀದ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲು ಮತ್ತು ಆತನನ್ನು ‘ಘೋಷಿತ ಅಪರಾಧಿ’ ಎಂದು ಗೊತ್ತುಪಡಿಸಲು NIA ಸಿದ್ಧತೆ ನಡೆಸುತ್ತಿದ್ದು, ಸಯೀದ್ ವಿರುದ್ಧ ಜಾಮೀನು ರಹಿತ ವಾರಂಟ್ ಪಡೆದುಕೊಂಡಿತ್ತು. ಆತ ಪಾಕಿಸ್ತಾನದಲ್ಲೇ ನೆಲೆಸಿದ್ದರೂ, ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವ ಭಾರತದ ಪ್ರಯತ್ನಗಳ ಮತ್ತೊಂದು ಹೆಜ್ಜೆಯಾಗಿ ಇದು ಹೊರಹೊಮ್ಮಿತ್ತು.

ಇದೀಗ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದು, NIA ಪ್ರತಿಪಾದನೆಯನ್ನು ತಿರಸ್ಕರಿಸಿದೆ. NIA ಚಾರ್ಜ್ಶೀಟ್ ಕಾಶ್ಮೀರಿ ರಾಜಕೀಯ ನಾಯಕತ್ವವನ್ನು ಗುರಿಯಾಗಿಸಲು ನಕಲಿ ಕಾನೂನು ಪ್ರಕ್ರಿಯೆಗಳನ್ನು ಬಳಸುವ ಭಾರತದ ನಿರಂತರ ನೀತಿಯ ಭಾಗವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ತಾಹೀರ್ ಅಂದ್ರಾವಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News