×
Ad

ಒಪ್ಪಂದಕ್ಕಾಗಿ ಟ್ರಂಪ್‌ ರಿಂದ ಹಲವು ಬಗೆಯ ಒತ್ತಡತಂತ್ರ: ಇರಾನ್‌ ನ ಸರ್ವೋಚ್ಚ ನಾಯಕ ಮುಜ್ತಾಬಾ ಖಾಮಿನೈ

Update: 2026-06-19 22:17 IST

ಮೊಹಮ್ಮದ್ ಪೆಝೆಶ್ಕಿಯಾನ್ | Photo Credit : PTI 

ಟೆಹರಾನ್, ಜೂ.19: ಮಧ್ಯಪ್ರಾಚ್ಯ ಯುದ್ಧವನ್ನು ಕೊನೆಗೊಳಿಸುವ ವಿಚಾರದಲ್ಲಿ ತಾನು ವಿಭಿನ್ನವಾದ ಅಭಿಪ್ರಾಯವನ್ನು ಹೊಂದಿದ್ದರೂ, ಅಮೆರಿಕದ ಜೊತೆ ಶಾಂತಿ ಒಪ್ಪಂದ ಏರ್ಪಡಿಸುವುದಕ್ಕೆ ತಾನು ಅಧ್ಯಕ್ಷ ಮೊಹಮ್ಮದ್ ಪೆಝೆಶ್ಕಿಯಾನ್ ಅವರಿಗೆ ಅನುಮತಿಯನ್ನು ನೀಡಿರುವುದಾಗಿ ಇರಾನ್‌ ನ ಸರ್ವೋಚ್ಚ ನಾಯಕ ಅಯಾತುಲ್ಲಾ ಮೊಜ್ತಬಾ ಖಾಮಿನೈ ಅವರು ತಿಳಿಸಿದ್ದಾರೆ.

ಯುದ್ಧದಲ್ಲಿ ತೀರಾ ಹತಾಶವಾಗಿದ್ದ ಅಮೆರಿಕವು ಈ ಒಪ್ಪಂದವನ್ನು ಏರ್ಪಡಿಸಿಕೊಳ್ಳಲು ಎಲ್ಲಾ ರೀತಿಯ ಒತ್ತಡತಂತ್ರಗಳನ್ನು ಅನುಸರಿಸಿತ್ತೆಂದು ಅವರು ಆರೋಪಿಸಿದರು.

ಯುದ್ಧವನ್ನು ಅಂತ್ಯಗೊಳಿಸಲು ಇರಾನ್ ಹಾಗೂ ಅಮೆರಿಕ ಒಪ್ಪಂದಕ್ಕೆ ಸಹಿಹಾಕಿದ ಬಳಿಕ ಮೊಜ್ತಬಾ ಅವರು ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿದೆ.

ಒಂದು ವೇಳೆ ಅಮೆರಿಕವು ಈ ಒಪ್ಪಂದಕ್ಕೆ ಸಂಬಂಧಿಸಿ ಅತಿಯಾದ ಬೇಡಿಕೆಗಳನ್ನು ಮುಂದಿರಿಸಿದಲ್ಲಿ, ಅವುಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ಪೆಝೆಶ್ಕಿಯಾನ್ ಅವರು ತನಗೆ ಭರವಸೆ ನೀಡಿದ್ದಾರೆಂದು ಖಾಮಿನೈ ತಿಳಿಸಿದ್ದಾರೆ.

‘‘ಭವಿಷ್ಯದಲ್ಲಿ ಮುಖಾಮುಖಿ ಮಾತುಕತೆಯನ್ನು ನಡೆಸುವುದೆಂದರೆ ಶತ್ರುವಿನ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದೆಂದು ಅರ್ಥವಲ್ಲ’’ ಎಂದು ಮುಜ್ತಬಾ ತನ್ನ ಸಂದೇಶದಲ್ಲಿ ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News