×
Ad

London | ರೈಲುಗಳ ನಡುವೆ ಮುಖಾಮುಖಿ ಢಿಕ್ಕಿ: ಓರ್ವ ಸಾವು , 80ಕ್ಕೂ ಅಧಿಕ ಮಂದಿಗೆ ಗಾಯ

Update: 2026-06-20 12:23 IST

‌Screengrab: X

ಲಂಡನ್: ಉತ್ತರ ಲಂಡನ್‌ ನಲ್ಲಿ ಎರಡು ರೈಲುಗಳು ಪರಸ್ಪರ ಢಿಕ್ಕಿ ಹೊಡೆದು ಓರ್ವ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಎರಡೂ ರೈಲುಗಳು ಲಂಡನ್ ನ ಸೇಂಟ್ ಪ್ಯಾಂಕ್ರಸ್ ನಿಲ್ದಾಣದ ಕಡೆಗೆ ಚಲಿಸುತ್ತಿದ್ದಾಗ, ಸಂಜೆ ಸುಮಾರು 5:15 ಕ್ಕೆ ಬೆಡ್ಫೋರ್ಡ್ ಪಟ್ಟಣದ ಹೊರವಲಯದಲ್ಲಿ ಈ ಅಪಘಾತ ಸಂಭವಿಸಿದೆ.

ಕಾರ್ಬಿಯಿಂದ ಸೇಂಟ್ ಪ್ಯಾಂಕ್ರಸ್ ಗೆ ಹೊರಟಿದ್ದ ರೈಲು ಮತ್ತು ನಾಟಿಂಗ್ ಹ್ಯಾಮ್ ನಿಂದ ಅದೇ ನಿಲ್ದಾಣಕ್ಕೆ ಹೊರಟಿದ್ದ ರೈಲುಗಳ ನಡುವೆ ಈ ಢಿಕ್ಕಿ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು, ಸ್ಥಳೀಯ ಅಗ್ನಿಶಾಮಕ ಮತ್ತು ರಕ್ಷಣಾ ದಳ ಹಾಗೂ ಆಂಬ್ಯುಲೆನ್ಸ್ ಸೇವೆಗಳು ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆಯನ್ನು ನಡೆಯುತ್ತಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, 80ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, 33 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ಮತ್ತು ವಿಡಿಯೋಗಳಲ್ಲಿ ಗಾಯಾಳುಗಳೂ ಸೇರಿದಂತೆ ಹಲವರು ರೈಲ್ವೆ ಹಳಿಗಳಿಗೆ ಸಮಾನಾಂತರವಾಗಿರುವ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ತುರ್ತು ಸೇವಾ ವಾಹನಗಳ ನಡುವೆ ನಿಂತಿರುವುದು ಮತ್ತು ಕುಳಿತಿರುವುದು ಕಂಡುಬಂದಿದೆ.

"ಹಲವರು ಗಾಯಗೊಂಡಿದ್ದಾರೆ ಮತ್ತು ಒಬ್ಬರು ಸಾವನ್ನಪ್ಪಿದ್ದಾರೆ ಎಂದು ನಮಗೆ ತಿಳಿದುಬಂದಿದೆ" ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನು 'ಪ್ರಮುಖ ವಿಪತ್ತು' ಎಂದು ಘೋಷಿಸಲಾಗಿದೆ.

ರೈಲ್ವೆ ಕಾರ್ಮಿಕರನ್ನು ಪ್ರತಿನಿಧಿಸುವ RMT ಯೂನಿಯನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರೈಲ್ವೆ ಸಿಬ್ಬಂದಿ ಹಾಗೂ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News