×
Ad

ಫ್ರಾನ್ಸ್ ಯುದ್ಧವಿಮಾನದ ಮೂಲಕ ಗಾಝಾಕ್ಕೆ ನೆರವು ಒದಗಿಸಿದ ಜೋರ್ಡಾನ್

Update: 2024-02-27 23:29 IST

ಅಮ್ಮಾನ್: ಮುತ್ತಿಗೆಗೆ ಒಳಗಾಗಿರುವ ಗಾಝಾ ಪಟ್ಟಿಗೆ ಮಾನವೀಯ ನೆರವು ವಿತರಿಸಲಾಗಿದ್ದು ಫ್ರಾನ್ಸ್‌ ನ ಯುದ್ಧವಿಮಾನದ ಮೂಲಕ ಆಹಾರ ಮತ್ತಿತರ ಅವಶ್ಯಕ ವಸ್ತುಗಳನ್ನು ಪೂರೈಸಲಾಗಿದೆ ಎಂದು ಜೋರ್ಡಾನ್ ಸೇನೆ ಹೇಳಿದೆ.

ಜೋರ್ಡಾನ್ ದೊರೆ ಅಬ್ದುಲ್ಲಾ ಅವರ ನಿರ್ದೇಶನದಡಿ ಫ್ರಾನ್ಸ್‌ ನ ಯುದ್ಧವಿಮಾನದ ಮೂಲಕ ನಾಲ್ಕು ಬಾರಿ ಆಹಾರ ಹಾಗೂ ಇತರ ಅಗತ್ಯದ ವಸ್ತುಗಳನ್ನು ಗಾಝಾದ ಜನತೆಗೆ ತಲುಪಿಸಲಾಗಿದೆ. ಅಕ್ಟೋಬರ್ 7ರಂದು ಗಾಝಾ ಯುದ್ಧ ತೀವ್ರಗೊಂಡ ಬಳಿಕ ಇದುವರೆಗೆ ಜೋರ್ಡಾನ್ ವಿಮಾನದ ಮೂಲಕ ಆಹಾರ ಉದುರಿಸುವ 16 ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ನೆದರಲ್ಯಾಂಡ್‍ನ ಜಂಟಿ ಸಹಯೋಗದಲ್ಲಿ ಈ ಹಿಂದೆ ನಡೆಸಿದ್ದ ಕಾರ್ಯಾಚರಣೆಯಲ್ಲಿ ಉತ್ತರ ಗಾಝಾದಲ್ಲಿ ಜೋರ್ಡಾನ್ ಸ್ಥಾಪಿಸಿರುವ ಆಸ್ಪತ್ರೆಗೆ ವೈದ್ಯಕೀಯ ನೆರವು ಒದಗಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News